ಕರ್ನಾಟಕ

karnataka

ETV Bharat / state

ಸಮಾಜಘಾತುಕರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ: ಹರ್ಷನ ಸಹೋದರಿ ಅಶ್ವಿನಿ ಮನವಿ - ಈಟಿವಿ ಭಾರತ ಕನ್ನಡ

ನಿನ್ನೆ ರಾತ್ರಿ ಬೈಕ್​ನಲ್ಲಿ ಬಂದ ಮೂವರು ಹರ್ಷನನ್ನು ಬಿಟ್ಟಿಲ್ಲ, ಆತನ ಸ್ನೇಹಿತರನ್ನು ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಹರ್ಷ ಸಹೋದರಿ ಅಶ್ವಿನಿ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

harsha-sister-appealed-to-the-government-to-protect-our-family
Etv Bharat ಹರ್ಷನ ಸಹೋದರಿ ಅಶ್ವಿನಿ

By

Published : Oct 25, 2022, 1:19 PM IST

Updated : Oct 25, 2022, 1:44 PM IST

ಶಿವಮೊಗ್ಗ: ಸಮಾಜಘಾತುಕಕರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಅಶ್ವಿನಿ ಅವರು ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಬೈಕ್​ನಲ್ಲಿ ಬಂದ ಮೂವರು ಹರ್ಷನನ್ನು ಬಿಟ್ಟಿಲ್ಲ, ಆತನ ಸ್ನೇಹಿತರನ್ನು ಸಹ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಶ್ವಿನಿ ತಿಳಿಸಿದ್ದಾರೆ.

ಸಮಾಜಘಾತುಕರಿಂದ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ.. ಅಶ್ವಿನಿ ಮನವಿ

ನಾವು ಈಗಾಗಲೇ ಹರ್ಷನನ್ನು ಕಳೆದುಕೊಂಡು ಎಂಟು ತಿಂಗಳಾಗಿದೆ. ಪ್ರೇಮ್ ಸಿಂಗ್​ ಎಂಬುವರಿಹೆ ಚೂರಿ ಇರಿತ ಸೇರಿದಂತೆ ಅನೇಕ ಘಟನೆಗಳು ನಡೆದಿವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಮೇಲಾಗಿ ಶಿವಮೊಗ್ಗ ನಗರದಲ್ಲಿ ಬಿಜೆಪಿ ಇದೆ. ನಮಗೆ ರಕ್ಷಣೆ ಯಾವಾಗ ಸಿಗುತ್ತದೆ. ಹರ್ಷನ ಟಾರ್ಗೆಟ್ ಮಾಡಿ ಹೊಡೆದರು. ಅವನು ಹಿಂದುತ್ವದ ಕೆಲಸ ಮಾಡಿದ್ದ ಅಂತ ಕೊಲೆ ಮಾಡಿದರು. ಅಂಥವನನ್ನೇ ಕೊಲ್ಲುತ್ತಾರೆ ಅಂದರೆ ನಮಗೆ ಯಾರು ರಕ್ಷಣೆ ಕೊಡುತ್ತಾರೆ ಎಂದು ಅಶ್ವಿನಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ :ಶಿವಮೊಗ್ಗ: ದುಷ್ಕರ್ಮಿಗಳಿಂದ ವ್ಯಕ್ತಿಯೊಬ್ಬನ ಕೊಲೆ

Last Updated : Oct 25, 2022, 1:44 PM IST

ABOUT THE AUTHOR

...view details