ಶಿವಮೊಗ್ಗ :ಫೆಬ್ರವರಿ 20ರಂದು ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯನ್ನ ಎನ್ಐಎ ತಂಡಕ್ಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಎನ್ಐಎ ತಂಡ ನಗರಕ್ಕೆ ಆಗಮಿಸಿದೆ. ಎನ್ಐಎ ತಂಡ ಹರ್ಷ ಕೊಲೆ ಪ್ರಕರಣದ ಎಲ್ಲಾ ಮಾಹಿತಿಯನ್ನು ಶಿವಮೊಗ್ಗದ ಪೊಲೀಸರಿಂದ ಪಡೆದುಕೊಳ್ಳುತ್ತಿದೆ. ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸಿದ ಶಿವಮೊಗ್ಗದ ಸಿಇಎನ್ ಪೊಲೀಸರಿಂದ ಎಲ್ಲಾ ಮಾಹಿತಿಯ ಜೊತೆಗೆ ದಾಖಲೆಗಳನ್ನು ಸಂಗ್ರಹಿಸುತ್ತಿದೆ.
ಎನ್ಐಎ ತಂಡ ಶಿವಮೊಗ್ಗ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹರ್ಷ ಕೊಲೆ ಪ್ರಕರಣವನ್ನು ನಮ್ಮ ರಾಜ್ಯದ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಈ ಪ್ರಖರಣದ ತನಿಖೆಯನ್ನ ಎನ್ಐಎಗೆ ವಹಿಸುವುದು ಸೂಕ್ತ ಎಂದೆನ್ನಿಸಿತ್ತು. ಹರ್ಷನ ಕೊಲೆಗಾರರ ಹಿನ್ನೆಲೆ, ಅವರ ಹಿಂದಿರುವ ಸಂಘಟನೆಗಳು ಎಲ್ಲವನ್ನು ನೋಡಿದಾಗ ಎನ್ಐಎಗೆ ಕೊಡಬೇಕು ಎನ್ನಿಸಿ ತನಿಖೆಗೆ ನೀಡಲಾಗಿದೆ.