ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷ ಸಾವನ್ನಪ್ಪಿ ಇಂದಿಗೆ ಮೂರು ದಿನಗಳಾಗಿವೆ. ಈ ನೋವಿನಲ್ಲಿರುವ ಹರ್ಷನ ಕುಟುಂಬ ಅಂತಿಮಯಾತ್ರೆ ವೇಳೆ ಗಾಯಗೊಂಡ ಗಾಯಾಳುಗಳನ್ನು ಭೇಟಿ ಮಾಡಿದೆ.
Watch.. ನೋವಿನಲ್ಲೂ ಮಾನವೀಯತೆ ಮೆರೆದ ಹರ್ಷ ಕುಟುಂಬ - ಶಿವಮೊಗ್ಗದಲ್ಲಿ ಅಂತಿಮ ಯಾತ್ರೆಯಲ್ಲಿ ಗಾಯಗೊಂಡವ್ರಿಗೆ ಪರಿಹಾರ ಹಂಚಿದ ಹರ್ಷ ಕುಟುಂಬ
ಹರ್ಷನ ಕುಟುಂಬ ತಮ್ಮ ನೋವಿನಲ್ಲಿಯು ಸಹ ಇಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡವರಿಗೆ ನೆರವು ನೀಡಿ ಬಂದಿದ್ದಾರೆ.
ನೋವಿನಲ್ಲೂ ಮಾನವೀಯತೆ ಮೆರೆದ ಹರ್ಷ ಕುಟುಂಬ
ಹೌದು ಹರ್ಷ ಹತ್ಯೆ ಆದ ನಂತರ ನಗರದಲ್ಲಿ ಸಾಕಷ್ಟು ಹಿಂಸಾಚಾರರಗಳು ನಡೆದು ಅನೇಕರಿಗೆ ಸಣ್ಣ ಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಹರ್ಷನ ಕುಟುಂಬ ತಮ್ಮ ನೋವಿನಲ್ಲಿಯೂ ಸಹ ಇಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡವರಿಗೆ ನೆರವು ನೀಡಿ ಬಂದಿದ್ದಾರೆ. ಒಟ್ಟಾರೆ ಹರ್ಷ ಸಾವಿನ ನೋವಿನಲ್ಲಿಯೂ ಮಾನವೀಯತೆ ಮೆರೆದ ಕುಟುಂಬಸ್ಥರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.