ಶಿವಮೊಗ್ಗ: ಯುವತಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರದು ಅಶ್ಲೀಲ ಫೋಟೋಗಳನ್ನು ಹಾಕಿ ಯುವತಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡುತ್ತಿದ್ದವನನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ನಕಲಿ ಫೇಸ್ಬುಕ್ ಖಾತೆ ತೆರೆದು ಯುವತಿಗೆ ಕಿರುಕುಳ: ಆರೋಪಿ ಬಂಧನ, ಮೊಬೈಲ್ ವಶ
ಆರೋಪಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಫೋಟೊಗಳನ್ನು ಹಾಕುತ್ತಿದ್ದನು. ಈ ಬಗ್ಗೆ ನೊಂದ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
harassed by opening a fake Facebook account
ಚಿಕ್ಕಮಗಳೂರು ಜಿಲ್ಲೆ ಹಿರೇಮಗಳೂರು ಗ್ರಾಮದ ವೇಣುಗೋಪಾಲ(30) ಎಂಬಾತ ಶಿವಮೊಗ್ಗದ ಯುವತಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಫೋಟೊಗಳನ್ನು ಹಾಕುತ್ತಿದ್ದನು. ಈ ಬಗ್ಗೆ ನೊಂದ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಕಲಂ 66(ಸಿ) 66(ಡಿ) 67ಐಟಿ ಆಕ್ಟ್ ಮತ್ತು 354(ಎ) 354(ಡಿ) ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.