ಶಿವಮೊಗ್ಗ: ಮಾಜಿ ಸಚಿವ, ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ ಅವರು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪನವರ ಮನೆಗೆ ಮಂಗಳವಾರ ಭೇಟಿ ನೀಡಿ ಕೆಲಕಾಲ ಸಮಾಲೋಚನೆ ನಡೆಸಿದರು.
ಸಾಗರದ ಗಾಂಧಿ ನಗರದ ಕಾಗೋಡು ತಿಮ್ಮಪ್ಪನವರ ಮನೆಗೆ ನಿನ್ನೆ ಸಂಜೆ ಭೇಟಿ ನೀಡಿದ್ದ ಹೆಚ್.ಡಿ. ರೇವಣ್ಣ, ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ, ನನ್ನ ಭೇಟಿಗೆ ರಾಜಕೀಯ ಬಣ್ಣ ಹಚ್ಚಬೇಡಿ. ನಾನು ಕಾಗೋಡು ತಿಮ್ಮಪ್ಪನವರ ಕುಶಲೋಪರಿ ವಿಚಾರಿಸಲು ಬಂದಿದ್ದೇನೆ ಎಂದರು.
ಹರಿಹರದಲ್ಲಿ ನಡೆದ ವಾಲ್ಮೀಕಿ ಸಮಾವೇಶ ಮುಗಿಸಿಕೊಂಡು ಶಿಕಾರಿಪುರಕ್ಕೆ ಬಂದಿದ್ದೆ. ನಮ್ಮ ದೇವಾಲಯದಲ್ಲಿ ಕೆತ್ತನೆ ಕೆಲಸ ಮಾಡುತ್ತಿದ್ದ ಓರ್ವರು ನಿಧನರಾಗಿದ್ದರು. ಈ ಹಿನ್ನೆಲೆ, ಅವರ ಮನೆಗೆ ಹೋಗಿದ್ದೆ. ಅಲ್ಲಿಂದ ಕಾಗೋಡು ತಿಮ್ಮಪ್ಪನವರ ಮನೆಗೆ ಬಂದಿದ್ದೇನೆ ಎಂದು ತಿಳಿಸಿದರು.