ಕರ್ನಾಟಕ

karnataka

ETV Bharat / state

ಗ್ರಾ.ಪಂ. ಚುನಾವಣೆ ಹಿನ್ನೆಲೆ: ಅಭ್ಯರ್ಥಿಗಳ ಮನೆ ಮುಂದೆ ವಾಮಾಚಾರ - Grampanchayath Election news

ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಮನೆ ಮುಂದೆ ವಾಮಾಚಾರ ಮಾಡಲಾಗಿದೆ.

ಅಭ್ಯರ್ಥಿಗಳ ಮನೆ ಮುಂದೆ ವಾಮಾಚಾರ
ಅಭ್ಯರ್ಥಿಗಳ ಮನೆ ಮುಂದೆ ವಾಮಾಚಾರ

By

Published : Dec 17, 2020, 4:22 PM IST

ಹುಬ್ಬಳ್ಳಿ:ಗ್ರಾ.ಪಂ. ಚುನಾವಣೆ ಅಭ್ಯರ್ಥಿ ಮನೆ ಮುಂದೆ ವಾಮಾಚಾರ ಮಾಡಿರುವ ಘಟನೆ ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ನಡೆದಿದೆ‌.

ಅಭ್ಯರ್ಥಿಗಳ ಮನೆ ಮುಂದೆ ವಾಮಾಚಾರ

ಬಸಾಪೂರ ಗ್ರಾಮದ ಪಾರ್ಶ್ವನಾಥ ಜೈನರ್ ಎಂಬುವವರ ಮನೆ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿ ಹೋಗಿದ್ದಾರೆ. ನಿಂಬೆ ಹಣ್ಣು, ಕೆಂಪು ಮೆಣಸಿನಕಾಯಿ ಕುಂಕುಮ, ಸೂಜಿ ಹಾಗೂ ಉಪ್ಪು ಹಾಕಿ ವಾಮಾಚಾರ ಮಾಡಿದ್ದಾರೆ. ಇದಲ್ಲದೇ ಪಾರ್ಶ್ವನಾಥರಿಗೆ ಸೂಚಕರಾಗಿರುವ ಮುನ್ನಾಸಾಬ ಮನೆ ಮುಂದು ವಾಮಾಚಾರ ಮಾಡಲಾಗಿದೆ‌.

ಓದಿ:ಗ್ರಾಮ ಪಂಚಾಯಿತಿಯಲ್ಲಿ ತಾಪಂ ಸದಸ್ಯನ ಸ್ಪರ್ಧೆ..!

ಶಿವಮೊಗ್ಗದಲ್ಲಿ ಓತಿಘಟ್ಟ ಗ್ರಾಮದ ಮನೆಗಳ ಮುಂದೆ ವಾಮಚಾರ:

ಶಿವಮೊಗ್ಗ ಜಿಲ್ಲೆಯ ಓತಿಘಟ್ಟ ಗ್ರಾಮದ ಮನೆಗಳ‌ ಮುಂದೆ ಅರಿಶಿನ, ಕುಂಕುಮ ಹಾಗೂ ನಿಂಬೆ ಹಣ್ಣುಗಳನ್ನು ಕಟ್ ಮಾಡುವ ಮೂಲಕ ವಾಮಾಚಾರ ಮಾಡಲಾಗಿದೆ. ನಿನ್ನೆ ರಾತ್ರಿ ವಾಮಚಾರ ನಡೆಸಲಾಗಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಎದ್ದ ತಕ್ಷಣ ತಮ್ಮ ಮನೆ ಮುಂದೆ ಇದ್ದ ನಿಂಬೆ ಹಣ್ಣು, ಅರಿಶಿನ- ಕುಂಕುಮ ನೋಡಿ ಮನೆಯವರು ಗಾಬರಿಯಾಗಿದ್ದಾರೆ. ಈ ರೀತಿ ಸುಮಾರು 100 ಮನೆಗಳ ಮುಂದೆ ಮಾಡಲಾಗಿದೆ.

ABOUT THE AUTHOR

...view details