ಕರ್ನಾಟಕ

karnataka

ETV Bharat / state

ಬಿಜೆಪಿ 365 ದಿನವು ಪಕ್ಷ‌ ಸಂಘಟನೆ ಮಾಡುತ್ತದೆ: ಸಚಿವ ಈಶ್ವರಪ್ಪ - Shivmogga

ಶಿವಮೊಗ್ಗ ಹೊರ ವಲಯದ ಪಿಇಎಸ್ ಕಾಲೇಜ್ ಆವರಣದಲ್ಲಿ ಇಂದು ನಡೆದ ಗ್ರಾಮ ಸ್ವರಾಜ್ ಸಮಾವೇಶವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.

KS Eshwarappa
ಸಚಿವ ಕೆ.ಎಸ್ ಈಶ್ವರಪ್ಪ

By

Published : Dec 2, 2020, 7:16 PM IST

ಶಿವಮೊಗ್ಗ: ಬಿಜೆಪಿ 365 ದಿನವೂ ಪಕ್ಷ ಸಂಘಟನೆ ಮಾಡುತ್ತಿರುತ್ತದೆ. ಚುನಾವಣೆ ಬಂದಾಗ ಚುನಾವಣೆ ಮಾಡುತ್ತೇವೆ. ಆದರೆ, ಬೇರೆ ಪಕ್ಷಗಳು ಸಂಘಟನೆಯನ್ನೇ ಮಾಡದೇ, ಚುನಾವಣೆ ಬಂದಾಗ ಮಾತ್ರ ಚುನಾವಣೆ ಮಾಡುತ್ತವೆ. ಇದೇ ಕಾರಣಕ್ಕೆ ರಾಷ್ಟ್ರದ ದೊಡ್ಡ ದೊಡ್ಡ ನಾಯಕರು ಸಹ ಸಂಘಟನೆ ಎಂಬ ಮಂತ್ರವನ್ನು ಜಪ‌ ಮಾಡುತ್ತಿದ್ದಾರೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಪಕ್ಷದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ

ಶಿವಮೊಗ್ಗ ಹೊರ ವಲಯದ ಪಿಇಎಸ್ ಕಾಲೇಜ್ ಆವರಣದಲ್ಲಿ ಇಂದು ನಡೆದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಇವರು, ಹಳ್ಳಿಯ ಸಾಮಾನ್ಯ ಕಾರ್ಯಕರ್ತನ ಪ್ರಯತ್ನದಿಂದಲೇ ಇಂದು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂದರು.

ಗ್ರಾಮ‌ ಪಂಚಾಯಿತಿ ಚುನಾವಣೆಯಲ್ಲಿ ಅದೇ ರೀತಿ ಪಕ್ಷದ ಕಾರ್ಯಕರ್ತನಿಗೆ ಮೊದಲ ಆದ್ಯತೆ ಹಾಗೂ ಗೆಲ್ಲುವ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕಿದೆ. ಪಕ್ಷದ ಕಾರ್ಯಕರ್ತನಿದ್ದರೂ ಗೆಲ್ಲುವ ಸಾಮರ್ಥ್ಯ ಇಲ್ಲ ಎಂದಾದ ಮೇಲೆ ಸ್ಪರ್ಧಿಸದಂತೆ ಮನವಿ‌ ಮಾಡುವಂತೆ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.

ಇನ್ನು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ತೊಂದರೆ ಆಗಬಾರದು ಎಂಬ ಕಾರಣದಿಂದ ನಾವುಗಳು ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಿಷ್ಠುರ ಆಗಲು ಹೋಗುವುದಿಲ್ಲ. ಹೀಗಾಗಿ ಯಾರು ಗೆದ್ದು ಬರುತ್ತಾರೆ ಅವರಿಗೆ ನಾವು ಶಾಲು ಹಾಕ್ತೀವಿ ಎನ್ನುವಂತಾಗಬಾರದು. ಸಂಘಟನೆ ಹಾಗೂ ಪಕ್ಷಕ್ಕೆ ಗೌರವ ಕೊಡುವವರಿಗೆ ಬೆಂಬಲಿಸಬೇಕಿದೆ ಎಂದರು.

ಸಮಾವೇಶದಲ್ಲಿ ಗ್ರಾಮ ಸ್ವರಾಜ್ಯ ಉಸ್ತುವಾರಿ ತುಳಸಿ ಮುನಿರಾಜು, ಭಾರತಿ ಶೆಟ್ಟಿ, ಭಾನು ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಬೂತ್ ಕಾರ್ಯಕರ್ತರು ಹಾಜರಿದ್ದರು.

ABOUT THE AUTHOR

...view details