ಕರ್ನಾಟಕ

karnataka

ETV Bharat / state

ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ ವಿರುದ್ದ ಪ್ರತಿಭಟನೆ: ಷಡಾಕ್ಷರಿ

ಹಿರಿಯ ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ ವಿರುದ್ದ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಸಿದೆ.

ನೌಕರರ ಆಕ್ರೋಶ
ನೌಕರರ ಆಕ್ರೋಶ

By

Published : Feb 10, 2020, 11:04 PM IST

ಶಿವಮೊಗ್ಗ:ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್​ ಅವರು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ತಮ್ಮಿಷ್ಟದಂತೆ ವರ್ಗಾವಣೆ ಮಾಡಿ, ತುಘಲಕ್ ದರ್ಬಾರ್ ಮಾಡುತ್ತಿದ್ದು, ಅವರ ವಿರುದ್ದ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಷಡಾಕ್ಷರಿ

ಮನೀಷ್ ಮೌದ್ಗಿಲ್ ಅವರು ಕಂದಾಯ ಇಲಾಖೆಯ ಸರ್ವೆ ವಿಭಾಗದ ಸರ್ವೆಯರ್​ಗಳನ್ನು ಬೀದರ್​​ನಿಂದ ರಾಮನಗರಕ್ಕೆ, ಮಂಗಳೂರಿನ ಸಿಬ್ಬಂದಿಯನ್ನು ರಾಯಚೂರಿಗೆ ವರ್ಗಾವಣೆ ಮಾಡಿದ್ದಾರೆ. ಈ ಮೂಲಕ ಅವರು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ತಾವೇ ಸರ್ವಾಧಿಕಾರಿಯಂತೆ ನಡೆದು ಕೊಳ್ಳುತ್ತಿದ್ದಾರೆ. ಈಗಾಗಲೇ ಕಂದಾಯ ಇಲಾಖೆಯ ನೌಕರರು ದಯಾಮರಣಕ್ಕೆ ಅರ್ಜಿ ಹಾಕುವ ಸ್ಥಿತಿಗೆ ಬಂದಿದ್ದಾರೆ ಎಂದು ಆರೋಪಿಸಿದರು.

ನಾಳೆ ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ಹೋಗಿ ಮನವಿ ಮಾಡಲಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದೆ ಹೋದರೆ, ರಾಜ್ಯದ ಎಲ್ಲಾ ಸರ್ವೆ ಕಚೇರಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details