ಶಿವಮೊಗ್ಗ :ಸಾಗರ ತಾಲೂಕು ನಿವೃತ್ತ ಸರ್ಕಾರಿ ನೌಕರರ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 1 ಲಕ್ಷದ 37 ಸಾವಿರ ರೂ. ದೇಣಿಗೆ ನೀಡಲಾಯಿತು.
ಸಿಎಂ ಪರಿಹಾರ ನಿಧಿ ₹1.37 ಲಕ್ಷ ದೇಣಿಗೆ ನೀಡಿದ ಸರ್ಕಾರಿ ನೌಕರರ ಸಂಘ - latest shivamogga sagar news
ಸಾರ ತಾಲೂಕು ಸರ್ಕಾರಿ ನೌಕರರ ವತಿಯಿಂದ ಕೋವಿಡ್-19 ಸಿಎಂ ಪರಿಹಾರ ನಿಧಿಗೆ 1 ಲಕ್ಷದ 37 ಸಾವಿರ ರೂ. ದೇಣಿಗೆ ನೀಡಲಾಯಿತು.
ಸಾಗರದ ಉಪ ವಿಭಾಗಾಧಿಕಾರಿಯವರಿಗೆ ತಮ್ಮ ದೇಣಿಗೆಯ ಹಣವನ್ನು ಚೆಕ್ ಮೂಲಕ ನೀಡಿದರು. ಕೊರೊನಾದಿಂದ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದೆ. ಇದಕ್ಕೆ ಸಾರ್ವಜನಿಕರು ಸರ್ಕಾರಕ್ಕೆ ಸಹಕಾರ ನೀಡಬೇಕು. ತುರ್ತು ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘ ಅವಶ್ಯಕವಾದ ದೇಣಿಗೆಯನ್ನು ಸರ್ಕಾರಕ್ಕೆ ನೀಡುತ್ತಾ ಬರುತ್ತಿದೆ. ಇದೇ ವೇಳೆ ಸಾಗರ ನಗರಸಭೆಯಲ್ಲಿ ನಿವೃತ್ತ ನೌಕರರ ಲೇಔಟ್ ಮಂಜೂರಾತಿ ನೆನೆಗುದಿಗೆ ಬಿದ್ದಿದೆ.
ಇದಕ್ಕೆ ಸ್ಪಂದಿಸುವಂತೆ ಉಪವಿಭಾಗಧಿಕಾರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಎಸ್ ಬಸವರಾಜ್, ಅಧ್ಯಕ್ಷ ಉಮೇಶ್ ಹಿರೇನಲ್ಲೂರು ಸೇರಿ ಪಧಾಧಿಕಾರಿಗಳು ಹಾಜರಿದ್ದರು.