ಶಿವಮೊಗ್ಗ:ಹುಟ್ಟಿನಿಂದಲೇ ಬೆಳಕಿನ ಕಿರಣಗಳನ್ನು ನೋಡದ ಈ ವ್ಯಕ್ತಿಯ ಹೆಸರು ರಜತ್ ದೀಕ್ಷಿತ್. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿ ವಾಸಮಾಡ್ತಿರೋ ಇವರ ಶೈಕ್ಷಣಿಕ ಸಾಧನೆ ಅನುಕರಣೀಯ. ಕುವೆಂಪು ವಿವಿಯ ಅಂತಿಮ ವರ್ಷದ ಇಂಗ್ಲಿಷ್ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದಿರುವ ರಜತ್, ಎಸ್ಎಸ್ಎಲ್ಸಿಯಲ್ಲಿ ಶೇಕಡಾ 96 ರಷ್ಟು ಸಾಧನೆ ಮಾಡಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇ 95 ಅಂಕ ಗಳಿಸಿದ್ದು, ಪದವಿಯಲ್ಲಿಯೂ ಎರಡನೇ ರ್ಯಾಂಕ್ ಪಡೆದಿದ್ದಾರೆ.
ದೃಷ್ಟಿ ಇಲ್ಲದಿದ್ದರೂ ವ್ಯಾಸಂಗದಲ್ಲಿ ಈತ ಬಲು ಚೂಟಿ: ಅಂಧತ್ವ ಮೆಟ್ಟಿ ನಿಂತು ಶಿವಮೊಗ್ಗ ಯುವಕನ ಸಾಧನೆ - ಶಿವಮೊಗ್ಗದಲ್ಲಿ ಕುರುಡ ವಿದ್ಯಾರ್ಥಿಯ ಸಾಧನೆ
ಅಂಧತ್ವ ಶಾಪ ಎಂದು ಭಾವಿಸುವವರಿಗೆ ಸೆಡ್ಡು ಹೊಡೆಯುವಂತೆ ಈ ಯುವಕ ಸಾರ್ಥಕತೆಯ ಬದುಕು ಕಟ್ಟಿಕೊಳ್ಳುತ್ತಿದ್ದಾನೆ. ಆಧುನಿಕ ಯುಗದಲ್ಲಿ ಕೊರತೆಗಳ ನೆಪಹೇಳಿ ಕೊರಗುವವರಿಗೆ ಈ ಯುವಕ ನಿಜಕ್ಕೂ ಮಾದರಿ. ಹುಟ್ಟಿನಿಂದಲೇ ಬೆಳಕನ್ನೇ ನೋಡದ ಈ ಯುವಕನ ಬಹುಮುಖ ಪ್ರತಿಭೆಯ ಕುರಿತಾಗಿದೆ ಈ ಸ್ಟೋರಿ..
ದೃಷ್ಠಿ ಇಲ್ಲದಿದ್ದರೂ ವ್ಯಾಸಂಗದಲ್ಲಿ ಈತ ಬಲು ಚೂಟಿ
ರಜತ್ಗೆ ಆರಂಭದಿಂದಲೂ ಕುಟುಂಬದ ಬೆಂಬಲ ಸಿಕ್ಕಿದೆ. ತಾಯಿ ಶೀಲಾ ಅವರೇ ರಜತ್ನ ಸ್ನಾತಕೋತ್ತರ ಮತ್ತು ಪದವಿ ಪರೀಕ್ಷೆಗಳನ್ನು ಬರೆದಿದ್ದಾರೆ. ಹಾಗಂತ ಓದಿನಲ್ಲಿ ಮಾತ್ರವಲ್ಲ. ಕರ್ನಾಟಕ ಸಂಗೀತದಲ್ಲಿ ಸೀನಿಯರ್ ಪರೀಕ್ಷೆಯಲ್ಲೂ ಪಾಸಾಗಿದ್ದು, ಬ್ರೈಲ್ ಮೂಲಕ ಪುಸ್ತಕ ಓದುವ ಅಭ್ಯಾಸವನ್ನೂ ಕೂಡಾ ರೂಢಿಸಿಕೊಂಡಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ರಜತ್ ದೀಕ್ಷಿತ್ ಈಗ ನೆಟ್ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಮುಂದೆ ಪ್ರೊಫೆಸರ್ ಆಗುವ ಆಸೆ ಹೊಂದಿದ್ದಾರೆ. ಐಎಎಸ್ ಆಗುವ ಬಯಕೆಯೂ ಇದ್ದು ಇಂಗ್ಲಿಷ್ ಸಾಹಿತ್ಯದಲ್ಲಿ ಪಿಹೆಚ್ಡಿ ಮಾಡುವ ಕನಸೂ ಇವರಿಗಿದೆ.