ಶಿವಮೊಗ್ಗ: ತಾಳಿ ಮತ್ತು ಕಿವಿಯೋಲೆ ಹೊರತಾಗಿ ಚಿನ್ನದ ಆಭರಣಗಳನ್ನೇ ಕಾಣದ ತನ್ನಮ್ಮನಿಗೆ ಆ ಯುವಕ ಒಟ್ಟೊಟ್ಟಿಗೆ 10 ಪದಕಗಳನ್ನು ಅರ್ಪಿಸಿದ್ದಾನೆ. ಪುಟ್ಟ ಪೆಟ್ಟಿಗೆಯಲ್ಲಿದ್ದ ಚಿನ್ನದ ಪದಕಗಳನ್ನು ಮುಟ್ಟಿದ ಆ ತಾಯಿ ಮಗನ ಗಲ್ಲಕ್ಕೆ ಮುತ್ತನ್ನಿಟ್ಟು ಆನಂದ ಬಾಷ್ಪ ಸುರಿಸಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವದಲ್ಲಿ 10 ಚಿನ್ನದ ಪಕಗಳನ್ನು ಗಳಿಸಿದ ಚನ್ನಗಿರಿ ತಾಲೂಕು ಮರವಂಜಿ ತಾಂಡಾದ ಎಚ್.ರಂಗನಾಥ್ ಅವರು ತಮ್ಮೆಲ್ಲ ಪದಕಗಳನ್ನು ತಾಯಿ ಮಡಿಲಿಗೆ ಅರ್ಪಿಸಿದರು. ಶಂಕರಘಟ್ಟದ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ನೊಂದಿಗೆ 10 ಪದಕಗಳನ್ನು ಗಳಿಸಿದ ರಂಗನಾಥ್ ರೈತ ಕೂಲಿ ಕಾರ್ಮಿಕರ ಕುಟುಂಬದಿಂದ ಬಂದವರು.
ಹತ್ತು ಸ್ವರ್ಣದ ಪದಕ ಪಡೆದ ರೈತನ ಮಗ ಮರವಂಜಿ ತಾಂಡಾದ ಹುನ್ಯಾನಾಯ್ಕ ಮತ್ತು ಗಂಗೀಬಾಯಿ 1 ಎಕರೆ ಹೊಲ ಬಿಟ್ಟರೆ ಮತ್ಯಾವ ಆಸ್ತಿ ಹೊಂದಿಲ್ಲ. ಕೂಲಿ ಮಾಡಿಕೊಂಡೇ ಮೂವರು ಮಕ್ಕಳನ್ನು ಕಷ್ಟಪಟ್ಟು ಓದಿಸಿದ್ದಾರೆ. ಮೊದಲನೇ ಮಗ ಬಿಇಡಿ ಮುಗಿಸಿದರೆ, ಎರಡನೇ ಮಗ ರಂಗನಾಥ ಪ್ರಾಧ್ಯಾಪಕನಾಗುವ ಗುರಿಯೊಂದಿಗೆ ಈಗ ಪಿಎಚ್‍ಡಿ ಮಾಡುತ್ತಿದ್ದಾರೆ.
ಹತ್ತು ಸ್ವರ್ಣದ ಪದಕ ಪಡೆದ ರೈತನ ಮಗ ಮನೆಯಲ್ಲಿ ಬಡತನವಿದ್ದರೂ ರಂಗನಾಥನಿಗೆ ಮಾತ್ರ ಸರಸ್ವತಿ ಒಲಿದಿದ್ದಾಳೆ. ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು.
ಹತ್ತು ಸ್ವರ್ಣದ ಪದಕ ಪಡೆದ ರೈತನ ಮಗ ರ‍್ಯಾಂಕ್ ಬರುತ್ತೆ ಎಂಬ ಆತ್ಮವಿಶ್ವಾಸವಿತ್ತು. ಆದರೆ, ಇಷ್ಟೊಂದು ಪದಕಗಳು ಬರುತ್ತವೆ ಎಂದು ನಿರೀಕ್ಷೆ ಇರಲಿಲ್ಲ. ಅಪ್ಪ ಅಮ್ಮನ ಪ್ರತಿ ದಿನದ ಕೂಲಿಯ ಮುಂದೆ ನನ್ನ ವ್ಯಾಸಂಗದ ಶ್ರಮ ದೊಡ್ಡದಲ್ಲ. ನಮಗಾಗಿ ಅವರು ತುಂಬಾ ಕಷ್ಟಪಟ್ಟಿದ್ದಾರೆ. ಮುಂದೆ ಪ್ರಾಧ್ಯಾಪಕನಾಗಿ ಅವರ ಕೂಲಿ ಬಿಡಿಸಬೇಕೆಂಬ ದೊಡ್ಡ ಕನಸು ಇದೆ ಎಂದು ತಮ್ಮ ಗುರಿಯ ಬಗ್ಗೆ ಹೇಳಿಕೊಂಡರು.
ರಂಗನಾಥ್ ಅವರಿಗೆ 10 ಚಿನ್ನ ಪದಕ ಅಲ್ಲದೇ 3 ನಗದು ಪುರಸ್ಕಾರ ನೀಡಲಾಯಿತು. ಬಡತನದಲ್ಲಿ ಹುಟ್ಟಿ ಬಡತನದಲ್ಲೇ ಸಾಯುವುದಲ್ಲ; ಅದರ ಹೊರತಾಗಿ ಸಾಧಿಸುವ ಛಲ ಇದ್ದರೆ ಹಾಗೂ ಓದುವ ಹಂಬಲ ಇದ್ದರೆ ಏನಾದರೂ ಸಾಧಿಸಬಹುದು ಎಂಬುದಕ್ಕೆ ಈ ರೈತನ ಮಗನ ಸಾಧನೆಯೇ ಸಾಕ್ಷಿ .