ಶಿವಮೊಗ್ಗ:ಪರ್ಯಾಯವಾಗಿ ನೀಡಿದಂತಹ ಜಮೀನನ್ನು ತಮ್ಮ ಸ್ವಾಧೀನಕ್ಕೆ ಕೊಡುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಶರಾವತಿ ಸಂತ್ರಸ್ತ ಕುಟುಂಬವೊಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದೆ.
ಪರ್ಯಾಯ ಜಮೀನು ನೀಡಲು ಆಗ್ರಹಿಸಿ ಶರಾವತಿ ಸಂತ್ರಸ್ತರ ಕಣ್ಣೀರು.. - ಪರ್ಯಾಯ ಜಮೀನು
ಸರ್ಕಾರ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸರ್ವೇ ನಂ. 8ರಲ್ಲಿ ನಾಲ್ಕು ಎಕರೆ ರೆವಿನ್ಯೂ ಭೂಮಿಯನ್ನು ಸಾಗುವಳಿ ಚೀಟಿ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಜಮೀನಿನಲ್ಲಿ ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆಯವರು ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ.
ಭದ್ರಾವತಿ ತಾಲೂಕಿನ ಕೆಂಚೇನಹಳ್ಳಿ ಗ್ರಾಮದ ಸೀತಾರಾಮ್ ಎಂಬುವರ ಕುಟುಂಬ ಪ್ರತಿಭಟನೆ ನಡೆಸುತ್ತಿದೆ. ಶರಾವತಿ ಸಂತ್ರಸ್ತರಾದ ನಮಗೆ ಮುಳುಗಡೆ ಜಮೀನಿನ ಪರ್ಯಾಯವಾಗಿ, ಸರ್ಕಾರ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸರ್ವೇ ನಂ. 8ರಲ್ಲಿ ನಾಲ್ಕು ಎಕರೆ ರೆವಿನ್ಯೂ ಭೂಮಿಯನ್ನು ಸಾಗುವಳಿ ಚೀಟಿ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಜಮೀನಿನಲ್ಲಿ ಸಾಗುವಳಿ ಮಾಡಲು ಹೋದರೆ ಅರಣ್ಯ ಇಲಾಖೆಯವರು ಜಮೀನು ಸಾಗುವಳಿ ಮಾಡಲು ಬಿಡುತ್ತಿಲ್ಲ.
ಹೀಗಾಗಿ ನಮಗೆ ಕೂಡಲೇ ಪರ್ಯಾಯ ಭೂಮಿ ನೀಡಬೇಕು. ಇಲ್ಲವಾದಲ್ಲಿ ಇಡೀ ಕುಟುಂಬ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಷಪ್ರಾಶನ ಮಾಡಿ ಸಾಯುತ್ತೇವೆ ಎಂದು ಎಚ್ಚರಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ತಮಗೆ ಕೊಡಬೇಕಾದ ಪರ್ಯಾಯ ಭೂಮಿಯನ್ನು ನಮ್ಮ ಸ್ವಾಧೀನಕ್ಕೆ ನೀಡುವವರೆಗೂ ಧರಣಿ ಮಾಡುತ್ತೇವೆ ಎಂದು ಪ್ರತಿಭಟಿಸುತ್ತಿದ್ದಾರೆ.