ಕರ್ನಾಟಕ

karnataka

ETV Bharat / state

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ : ತಾಯಿಯ ಉಪಾಯದಿಂದ ತಂದೆ ಅಂದರ್! - ಶಿವಮೊಗ್ಗದ ಲೇಟೆಸ್ಟ್​​ ಕ್ರೈಂ ನ್ಯೂಸ್​

ಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ..

Girl raped by father in Shivamogga
ಸಾಂದರ್ಭಿಕ ಚಿತ್ರ

By

Published : Feb 2, 2022, 2:10 PM IST

ಶಿವಮೊಗ್ಗ :ಮಗಳ ಮೇಲೆ ಪಾಪಿ ತಂದೆಯೊಬ್ಬ ನಿರಂತರ ಅತ್ಯಾಚಾರ ನಡೆಸಿದ್ದು, ಕೊನೆಗೆ ತಾಯಿಯ ಉಪಾಯದಿಂದ ಪೊಲೀಸರ ಅತಿಥಿಯಾಗಿದ್ದಾನೆ. ಶಿವಮೊಗ್ಗದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ.

ಮೂಲತಃ ಇವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನವರು. ಆರೋಪಿ ತನ್ನೂರಿನಲ್ಲಿ ಶುಂಠಿ ವ್ಯಾಪಾರ ಮಾಡಿಕೊಂಡಿದ್ದ. ಈತನಿಗೆ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ. ದುರಳ ತಂದೆ, ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದನಂತೆ. ತನ್ನ ತಂದೆಯ ದುಷ್ಕೃತ್ಯವನ್ನು ತನ್ನ ತಾಯಿಗೂ ಹೇಳದೆ ಸಹಿಸಿಕೊಂಡಿದ್ದಾಳೆ. ಆದರೆ, ಕೊನೆಗೆ ಅನಿವಾರ್ಯವಾಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ:ಮೃತ ವ್ಯಕ್ತಿ ಹೆಸರಲ್ಲಿ 30 ಸಾಲದ ಖಾತೆ ತೆರೆದು ಕೋಟ್ಯಂತರ ರೂ. ವಂಚನೆ ಆರೋಪ!?

ವಿಷಯ ತಿಳಿದ ಬಾಲಕಿಯ ತಾಯಿ ತನ್ನ ಮಗಳಿಗೆ ಮದುವೆ ಮಾಡುವ ಯೋಚನೆ ಮಾಡುತ್ತಾಳೆ. ಓರ್ವ ಹುಡುಗನನ್ನು ಹುಡುಕಿ ಕಳೆದ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದಾರೆ. ತನ್ನ ಮಗಳಿಗೆ ಯಾವಾಗ ನಿಶ್ಚಿತಾರ್ಥವಾಯಿತೋ ಆಗ ಪಾಪಿ ತಂದೆ ಮಗಳಿಗೆ ಮದುವೆ ಆಗದಂತೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇರೆ ದಾರಿ ಕಾಣದೇ ತಾಯಿ ತನ್ನ ಮೂವರು ಮಕ್ಕಳೂಂದಿಗೆ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ.

ಅದರಂತೆ ಬಾಲಕಿಯ ತಾಯಿ ಗೋವಿಂದಪುರದಲ್ಲಿದ್ದ ತನ್ನ ಅಕ್ಕನಿಗೆ ಫೋನ್​​ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ವಿಚಾರ ತಿಳಿಸುತ್ತಾಳೆ. ಆಗ ಅವರು ಆತ್ಮಹತ್ಯೆ ನಿರ್ಧಾರ ಬಿಟ್ಟು ಗೋವಿಂದಪುರಕ್ಕೆ ಬರುವಂತೆ ತಿಳಿಸಿ, ಊರಿಗೆ ಕರೆಯಿಸಿಕೊಳ್ಳುತ್ತಾರೆ. ಈ ವೇಳೆ ನಿಮ್ಮ ಪತ್ನಿ, ಮಕ್ಕಳು ಕಾಣುತ್ತಿಲ್ಲವೆಂದು ಆರೋಪಿಯನ್ನು ಗೋವಿಂದಪುರಕ್ಕೆ ಕರೆಯಿಸಿಕೊಂಡಿದ್ದಾರೆ. ಬಳಿಕ ಶಿವಮೊಗ್ಗದ ಮಹಿಳಾ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗ್ತಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details