ಶಿವಮೊಗ್ಗ :ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಹಾವು ಕಚ್ಚಿದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ (7) ಮೃತ ಬಾಲಕಿ. ಈಕೆ ದೊಡ್ಡೇರಿಯ ಹಿರಿಯಪ್ಪ ಹಾಗೂ ಮಮತಾ ದಂಪತಿಯ ಪುತ್ರಿ.
ಮನೆಯ ಬಳಿ ಆಟವಾಡುತ್ತಿದ್ದಾಗ ಬಾಲಕಿಗೆ ಹಾವು ಕಡಿದಿದೆ. ತಕ್ಷಣ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಸಾಗರದ ಆಸ್ಪತ್ರೆಗೆ ಕರೆತರುವಾಗ ದಾರಿ ಮಧ್ಯೆ ಕೆಳದಿ ರಸ್ತೆಯ ಅಬ್ಬಾಸ್ ಅವರಲ್ಲಿ ನಾಟಿ ಔಷಧಿ ದೊರೆಯುವ ವಿಳಾಸ ಕೇಳಿದ್ದಾರೆ.