ಕರ್ನಾಟಕ

karnataka

ETV Bharat / state

ಮನೆಗಳ್ಳತನ ಪ್ರಕರಣ.. ಶಿವಮೊಗ್ಗದಲ್ಲಿ ಜಂಗ್ಲಿ ಮಂಜುನಾಥ ಗ್ಯಾಂಗ್​ ಅರೆಸ್ಟ್, 11 ಲಕ್ಷ ರೂ ನಗದು ವಶ - ತುಂಗಾನಗರ ಪೊಲೀಸರು

ಮನೆಗಳ್ಳತನ ನಡೆಸುತ್ತಿದ್ದ ಜಂಗ್ಲಿ ಮಂಜುನಾಥ ಮತ್ತು ಅತನ ಸಹಚರರನ್ನು ಶಿವಮೊಗ್ಗದ ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

gang of house robberies was arrested
ಮನೆಗಳ್ಳತನ ನಡೆಸುತ್ತಿದ್ದ ಗ್ಯಾಂಗ್ ಅರೆಸ್ಟ್

By

Published : Dec 10, 2022, 10:14 PM IST

ಶಿವಮೊಗ್ಗ: ಮನೆಗಳ್ಳತನ ಮಾಡುತ್ತಿದ್ದ ಜಂಗ್ಲಿ ಮಂಜುನಾಥ ಮತ್ತು ಸಹಚರರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಗಸವಳ್ಳಿ ಗ್ರಾಮದ ಮನೆ ಬೀಗ ಮುರಿದು ಹಣ ಹಾಗೂ ಬಂಗಾರವನ್ನು ಕದ್ದು ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದ ಪೊಲೀಸರು, ಜಂಗ್ಲಿ ಮಂಜುನಾಥ್ ಆ್ಯಂಡ್ ಗ್ಯಾಂಗ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಗಸವಳ್ಳಿ ಗ್ರಾಮದ ಮನೆ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಭದ್ರಾವತಿ ತಾಲೂಕು ಹೊಳೆಹೊನ್ಜೂರು ಕಾಳಿಕಾನಗರದ ನಿವಾಸಿಗಳಾದ ಮಂಜುನಾಥ್ ಅಲಿಯಾಸ್ ಜಂಗ್ಲಿ ಮಂಜು(31) ಅರುಣ್(18), ಜಾವಳ್ಳಿ ಗ್ರಾಮದ ಅಶೋಕ್(19) ಹಾಗೂ ಪಿಳ್ಳಂಗೇರಿ ಗ್ರಾಮದ ಮೊಹಮ್ಮದ್ ಸುಹೇಲ್ ಅಲಿಯಾಸ್ ಟುಯ್ಯಿ(28) ಬಂಧಿತ ಆರೋಪಿಗಳು.

ಬಂಧಿತರಿಂದ 11.52 ಲಕ್ಷ ರೂ ನಗದು ಹಾಗೂ 1.50 ಲಕ್ಷ ರೂ ಮೌಲ್ಯದ 30 ಗ್ರಾಂ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಕುಖ್ಯಾತ ಆಟೋ ಕಳ್ಳರ ಬಂಧನ: 15 ಲಕ್ಷ ರೂ ಮೌಲ್ಯದ ಆಟೋ, ಬೈಕ್ ವಶ

ABOUT THE AUTHOR

...view details