ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ವೈಭವದ ಗಣೇಶನ ರಾಜಬೀದಿ ಉತ್ಸವ - ಬಿ.ವೈ.ರಾಘವೇಂದ್ರ

ಶಿವಮೊಗ್ಗ ಹಿಂದೂ ಸಂಘಟನಾ ಮಹಾ ಮಂಡಳಿಯ ಗಣೇಶನ ರಾಜಬೀದಿ ಉತ್ಸವ ಬಹುತೇಕ ಶಾಂತಿಯುತವಾಗಿ ಜರುಗುತ್ತಿದೆ.

ಹಿಂದೂ ಸಂಘಟನಾ ಮಹಾ ಮಂಡಲಿಯ ಗಣೇಶನ ಭರ್ಜರಿ ರಾಜಬೀದಿ ಉತ್ಸವ

By

Published : Sep 12, 2019, 11:33 PM IST

ಶಿವಮೊಗ್ಗ: ಜಿಲ್ಲೆಯ ಹಿಂದೂ ಸಂಘಟನಾ ಮಹಾ ಮಂಡಳಿಯ ಗಣೇಶನ ರಾಜಬೀದಿ ಉತ್ಸವ ಬಹುತೇಕ ಶಾಂತಿಯುತವಾಗಿ ಜರುಗುತ್ತಿದೆ.

ಹಿಂದೂ ಸಂಘಟನಾ ಮಹಾ ಮಂಡಲಿಯ ಗಣೇಶನ ಭರ್ಜರಿ ರಾಜಬೀದಿ ಉತ್ಸವ

ಗಣೇಶನ ರಾಜಬೀದಿ ಉತ್ಸವ ಗಾಂಧಿ ಬಜಾರ್​ಗೆ ಬರುತ್ತಿದ್ದಂತೆಯೇ ಯುವಕರು- ಯುವತಿಯರು ಹಾಗೂ ಮಹಿಳೆಯರು ಕುಣಿದು ಕುಪ್ಪಳಿಸಿದರು. ಈ ವೇಳೆ ಮಸೀದಿ ಮುಂಭಾಗದಲ್ಲಿ ಕೆಲ ಕಾಲ ನೂಕು ನುಗ್ಗಲು ಉಂಟಾಯಿತು. ಈ ವೇಳೆ ಎಸ್ಪಿ ಶಾಂತರಾಜು ಭಕ್ತರನ್ನು ಮುಂದೆ ಕಳುಹಿಸುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದ್ದರು. ಇದರಿಂದ ನೂಕಾಟ ನಡೆದರೂ ಕೂಡಾ ಪೊಲೀಸ್ ಸಿಬ್ಬಂದಿ ಯುವಕರನ್ನು ಮುಂದೆ ಕಳುಹಿಸುವ ಕೆಲ್ಸ ಮಾಡಿದರು.

ಸಂಸದ ಹಾಗೂ ಈಶ್ವರಪ್ಪ ಪುತ್ರನನ್ನು ಹೆಗಲ ಮೇಲೆ ಹೊತ್ತ ಅಭಿಮಾನಿಗಳು:

ಗಾಂಧಿ ಬಜಾರ್​ನ ಬಸವೇಶ್ವರ ದೇವಾಲಯದ ಬಳಿ ಗಣೇಶನ ಮೆರವಣಿಗೆ ಆಗಮಿಸುತ್ತಿದ್ದಂತೆಯೇ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪುತ್ರನ ಜೊತೆ ಆಗಮಿಸಿದರು. ನಂತ್ರ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿದರು. ಈ ವೇಳೆ ರಾಘವೇಂದ್ರ ಹಾಗೂ ಈಶ್ವರಪ್ಪನವರ ಪುತ್ರ ಹಾಲಿ ಜಿ.ಪಂ ಸ್ಥಾಯಿ ಸಮಿತಿ ಸದಸ್ಯ ಕಾಂತೇಶ್​ರನ್ನು ಅಭಿಮಾನಿಗಳು ತಮ್ಮ ಹೆಗಲ ಮೇಲೆ ಹೊತ್ತು‌ ಕುಣಿದರು.

ಸಂಜೆ 7 ಗಂಟೆಯ ಸುಮಾರಿಗೆ ಗಣೇಶನ ಮೆರವಣಿಗೆ ಎ.ಎ.ವೃತ್ತಕ್ಕೆ ಆಗಮಿಸಿತು. ಈ ವೇಳೆ ಯುವಕರು ಡ್ಯಾನ್ಸ್ ಮಾಡುತ್ತಾ ಅಲ್ಲೆ ಕೆಲ ಕಾಲ ನಿಂತಿದ್ದರು. ನಂತ್ರ ಪೊಲೀಸರು ಒಬ್ಬೊರನ್ನೇ ಮುಂದಕ್ಕೆ ಕಳುಹಿಸಿದರು. ಮೆರವಣಿಗೆಯು ಇನ್ನೂ ಗೋಪಿ ವೃತ್ತ ದಿಂದ ದುರ್ಗಿಗುಡಿ, ಅಂಬೇಡ್ಕರ್ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತದ ಮೂಲಕ ಪುನಃ ಭೀಮೇಶ್ವರನ ಮಡುವಿಗೆ ಬರುವಷ್ಟರಲ್ಲಿ ರಾತ್ರಿ ಒಂದು ಗಂಟೆ ಆಗುವ ಸಾಧ್ಯತೆಗಳಿವೆ.ಎಸ್ಪಿ ಶಾಂತರಾಜು ರವರು ಪೊಲೀಸ್ ಇಲಾಖೆಯ ಬಂದೋಬಸ್ತ್​ನ ಜವಾಬ್ದಾರಿ ವಹಿಸಿಕೊಂಡಿದ್ದರು.

ABOUT THE AUTHOR

...view details