ಶಿವಮೊಗ್ಗ: ಎಲ್ಲೆಡೆ ಗಣೇಶ ಹಬ್ಬಕ್ಕೆ ಸಿದ್ಧತೆ ನಡೆಯುತ್ತಿದೆ. ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗಣೇಶೋತ್ಸವ ಸಮಿತಿಯವರಿಗೆ ತಮ್ಮ ತಮ್ಮ ಪೆಂಡಾಲ್ನಲ್ಲಿ ಹಾಕಲು ಬಾಲಗಂಗಾಧರ್ ತಿಲಕ್, ವಿನಾಯಕ ದಮೋದರ್ ಸಾವರ್ಕರ್ ಫ್ಲೆಕ್ಸ್ ಹಾಗೂ ಎರಡು ಕೇಸರಿ ಧ್ವಜಗಳನ್ನು ಹಿಂದು ರಾಷ್ಟ್ರ ಭಕ್ತರ ಬಳಗ ವಿತರಿಸಿದೆ.
ಈ ಮೂಲಕ ಗಣೇಶ ಮೂರ್ತಿ ನೋಡಲು ಬರುವವರಿಗೆ ದೇಶ ಭಕ್ತರ ಪರಿಚಯ ಮಾಡಲು ರಾಷ್ಟ್ರ ಭಕ್ತರ ಬಳಗ ನಿರ್ಧರಿಸಿದೆ. ಇಂದು ಶಿವಮೊಗ್ಗದ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಧ್ವಜ ಹಾಗೂ ಫ್ಲೆಕ್ಸ್ ಅನ್ನು ವಿತರಿಸಲಾಯಿತು.
ಕೇಸರಿ ಧ್ವಜ, ತಿಲಕ್, ಸಾವರ್ಕರ್ ಫ್ಲೆಕ್ಸ್ ವಿತರಣೆ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ್ ತಿಲಕರು ಬ್ರಿಟಿಷರಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲೆಂದು ದೇಶದ ಜನರನ್ನು ಒಗ್ಗೂಡಿಸಲು ಗಣೇಶನ ಮೂರ್ತಿಯನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸೂಚಿಸಿದ್ದರು. ಇದನ್ನೇ ಒಂದು ಆಂದೋಲವನ್ನಾಗಿ ಮಾಡಿಕೊಂಡಿದ್ದರು. ಇದರಂತೆ ಸಾವರ್ಕರ್ ಅವರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿ 23 ವರ್ಷಗಳ ಕಾಲ ಕಾರಾಗೃಹ ವಾಸ ಅನುಭವಿಸಿದ್ದರು. ಹಾಗಾಗಿ ತಿಲಕರ ಹಾಗೂ ಸಾವರ್ಕರ್ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ವಿತರಿಸಲಾಗುತ್ತಿದೆ ಎಂದು ಹಿಂದು ರಾಷ್ಟ್ರ ಭಕ್ತರ ಬಳಗದವರು ತಿಳಿಸಿದರು.
ಇದನ್ನೂ ಓದಿ:ಎಲ್ಲಡೆ ಗಣೇಶೋತ್ಸವಕ್ಕೆ ಭರದ ಸಿದ್ಧತೆ.. ಸಂಪ್ರದಾಯಬದ್ಧ ಆಚರಣೆಯಿಂದ ಪ್ರಸನ್ನನಾಗುತ್ತಾನೆ ಗಣಪ