ಕರ್ನಾಟಕ

karnataka

ETV Bharat / state

ಶಿಕಾರಿಪುರ: ಸಿಎಂ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಜೋರು... - ಗಣೇಶನನ್ನ ತಂದ ಸಂಸದ ರಾಘವೇಂದ್ರ

ಪುತ್ರನೊಂದಿಗೆ ಸಂಸದ ರಾಘವೇಂದ್ರ ಅವರು ಮಾರುಕಟ್ಟೆಗೆ ತೆರಳಿ ಗೌರಿ-ಗಣೇಶನನ್ನು ತಂದು ಪ್ರತಿಷ್ಠಾಪಿಸಿದರು.

ಸಿಎಂ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಜೋರು
ಸಿಎಂ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಜೋರು

By

Published : Aug 22, 2020, 2:52 AM IST

ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರ ಶಿಕಾರಿಪುರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಕಳೆ ಮನೆ ಮಾಡಿದೆ.

ಶುಕ್ರವಾರ ಸಂಜೆ ಸಂಸದ ರಾಘವೇಂದ್ರ ಅವರು ತಮ್ಮ ಮಗನೊಂದಿಗೆ ಸ್ವತಃ ತಾವೇ ಗಣೇಶನನ್ನು ತಂದರು. ಸಂಸದರು, ಪುತ್ರನೊಂದಿಗೆ ಜರಿ ಪಂಚೆ, ಶಲ್ಯದಲ್ಲಿ ಮಾರುಕಟ್ಟೆಗೆ ತೆರಳಿ ಗೌರಿ-ಗಣೇಶನನ್ನು ಮನೆಗೆ ಕರೆತಂದರು.

ಸಿಎಂ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಜೋರು

ಗಣೇಶನನ್ನು ಮನೆಗೆ ತರುತ್ತಿದ್ದಂತೆಯೇ ಸಂಸದರ ಪತ್ನಿ ತೇಜಸ್ವಿನಿ ಅವರು ಆರತಿ ಎತ್ತಿ ಮನೆಗೆ ಬರ ಮಾಡಿಕೊಂಡರು. ನಂತರ ತಮ್ಮ ದೇವರ ಮನೆಯಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿದರು. ಶನಿವಾರ ಪೂಜೆ ನೆರವೇರಿಸಿ ಸಂಜೆ ನಿಮಜ್ಜನ ಮಾಡಲಿದ್ದಾರೆ.

ABOUT THE AUTHOR

...view details