ಕರ್ನಾಟಕ

karnataka

ETV Bharat / state

ಅಡಕೆ ಬೆಳೆಗಾರರನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಎಲೆಚುಕ್ಕಿ ರೋಗ - ಈಟಿವಿ ಭಾರತ ಕನ್ನಡ

ಮಳೆ ಹೆಚ್ಚಾಗಿರುವ ಮಲೆನಾಡಿನ ಪ್ರದೇಶಗಳಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಕೃಷಿ ಇಲಾಖೆ ಮತ್ತು ರೈತರು ರೋಗದ ವಿರುದ್ಧ ಸಮರೋಪಾದಿಯಲ್ಲಿ ಹೋರಾಡುತ್ತಿದ್ದಾರೆ. ಆದರೆ, ರೈತ ಮತ್ತು ವಿಜ್ಞಾನಿಗಳಿಗೆ ಶಿಲೀಂದ್ರ ಚಳ್ಳೆ ಹಣ್ಣು ತಿನ್ನಿಸುತ್ತಿದೆ.

Etv Bharatfungal-disease-in-areca-nut-leaf-plantations-in-shivamogga
ಎಲೆಚುಕ್ಕಿ ರೋಗ

By

Published : Nov 26, 2022, 9:28 PM IST

ಶಿವಮೊಗ್ಗ: ಅಡಕೆ ಬೆಳೆಗಾರರು ಎಲೆಚುಕ್ಕಿ ರೋಗಕ್ಕೆ ಹೈರಾಣಾಗಿದ್ದಾರೆ. ಮಲೆನಾಡಿನ ಪ್ರದೇಶಗಳಾದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೋಗ ವ್ಯಾಪಕವಾಗಿ ಕಾಣಿಸಿಕೊಂಡಿದೆ. ಮೊದಲು ಚಿಕ್ಕಮಗಳೂರಿನ ಎನ್.ಆರ್.ಪುರ, ಕೊಪ್ಪ ,ಶೃಂಗೇರಿ ಭಾಗದಲ್ಲಿದ್ದ ಈ ರೋಗ ಕಳೆದ ಮೂರು ವರ್ಷಗಳಿಂದ ಆಗುಂಬೆ ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ.

ಎಲೆಚುಕ್ಕಿ ರೋಗದ ಲಕ್ಷಣಗಳು:ಎಲೆಚುಕ್ಕಿ ರೋಗ ಎಂದರೆ ಚುಕ್ಕಿ ರೀತಿಯಲ್ಲಿ ಹುಳಗಳು ಕಾಣಿಸಿಕೊಂಡು ಕ್ರಮೇಣ ಎಲೆಯನ್ನು ತಿನ್ನುತ್ತಾ ಸಾಗುತ್ತದೆ. ಹಸಿರಾಗಿದ್ದ ಎಲೆಗಳು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗಿ ಉದುರಲು ಪ್ರಾರಂಭಿಸುತ್ತವೆ. ಇದರಿಂದ ಅಡಕೆ ಮರ ಬೋಳಾಗುತ್ತದೆ. ಕೊನೆಗೆ ಹೊಂಬಾಳೆ ಬಿಡದೆ, ಮರ ಒಣಗುತ್ತಾ ಬಿದ್ದು ಹೋಗುತ್ತದೆ.

ಆಗುಂಬೆ ಭಾಗದ ಬಹುತೇಕ ರೈತರ ತೋಟಗಳಿಗೆ ಎಲೆಚುಕ್ಕಿ ರೋಗ ಬಾದಿಸುತ್ತಿದೆ. ಇಲ್ಲಿನ ನಾಗರಾಜ್​ ಎಂಬುವವರ ತೋಟ ಸಂಪೂರ್ಣ ರೋಗಕ್ಕೆ ತುತ್ತಾಗಿದೆ. ಕೃಷಿ ಇಲಾಖೆಯ ಸಲಹೆ ಮೇರೆಗೆ ಎಲ್ಲ ರೀತಿಯ ಔಷಧ ಪ್ರಯೋಗಗಳು ಮಾಡಿದ್ದೇವೆ. ಆದರೆ, ಯಾವುದೇ ಫಲ ದೊರೆತಿಲ್ಲ. ಕಳೆದ ಮೂರು ವರ್ಷಗಳಿಂದ ಸುಮಾರು 15 ಲಕ್ಷ ನಷ್ಟ ಉಂಟಾಗಿದೆ ಎಂದು ನಾಗರಾಜ್​ ಅವರು ಅಳಲು ತೋಡಿಕೊಂಡಿದ್ದಾರೆ.

ಅಡಕೆ ಬೆಳೆಗಾರರನ್ನು ಹಿಂಡಿಹಿಪ್ಪೆ ಮಾಡುತ್ತಿರುವ ಎಲೆಚುಕ್ಕಿ ರೋಗ

ತೇವಾಂಶ ಹೆಚ್ಚಿರುವುದರಿಂದ ರೋಗ ಉಲ್ಬಣ :ಆಗುಂಬೆ ಪ್ರದೇಶದಲ್ಲಿ ಸಾಮಾನ್ಯ ಮಳೆ ಹೆಚ್ಚಾಗಿರುವುದರಿಂದ ತೇವಾಂಶ ಅಧಿಕವಾಗಿರುತ್ತದೆ. ಇದರಿಂದ ಈ ಪ್ರದೇಶದಲ್ಲಿ ರೋಗ ತೀವ್ರವಾಗಿ ಹರಡುತ್ತಿದೆ. ಗಾಳಿಯಲ್ಲಿ ರೋಗ ಹರಡವುದರಿಂದ ಹತೋಟಿಗ ತರುವುದು ಕಷ್ಟಕರವಾಗಿದೆ.

ಪ್ರಸಕ್ತ ವರ್ಷ ಮಳೆ ಹೆಚ್ಚಾದ ಕಾರಣ ಈ ರೋಗ ಹೆಚ್ಚಾಗಿ ಹರಡುತ್ತಿದೆ. ಎಲೆಚುಕ್ಕಿ ರೋಗಕ್ಕೆ ಕೊಲ್ಟ್ರಾಟ್ ವೈಕಂ, ಫಿಲೋಸಿಟ್ಸ, ಪೆಸ್ಟೊಲೇಷಿಯ ಎಂಬ ಮೂರು ರೀತಿಯ ಶೀಲಿಂದ್ರಗಳು ಕಾರಣ. ಇದಕ್ಕೆ ಅಡಕೆ ಬೆಳೆಗಾರರು ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ತೋಟಗಾರಿಕಾ ಉಪ ನಿರ್ದೆಶಕ ಪ್ರಕಾಶ್ ತಿಳಿಸಿದ್ದಾರೆ.

ಇದನ್ನೂ ಓದಿ:ಅಡಕೆ ಎಲೆ ಚುಕ್ಕಿ ರೋಗ ತಡೆಗೆ ಸರ್ಕಾರದಿಂದ ಉಚಿತ ಔಷಧ ವಿತರಣೆ : ಗೃಹ ಸಚಿವರು

ರೈತರಿಗೆ ತರಬೇತಿ : ಈ ರೋಗದಿಂದ ಫಸಲಿನಲ್ಲಿ ಶೇ 25 ರಷ್ಟು ಕಡಿಮೆಯಾಗಿದೆ. ಹಾಲಿ ಜಿಲ್ಲೆಯಲ್ಲಿ 6.395 ಹೆಕ್ಟರ್ ಪ್ರದೇಶದಲ್ಲಿ ಹಾನಿಯನ್ನುಂಟು ಮಾಡಿದೆ. ತೋಟಗಾರಿಕಾ ಇಲಾಖೆ, ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಅಡಕೆ ಸಂಶೋಧನ ಕೇಂದ್ರ ರೈತರ ಬೆನ್ನಿಗೆ ಇದೆ. ಈ ರೋಗದ ಹತೋಟಿಗೆ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ಭಾಗದಲ್ಲಿ ಅಡಕೆ ಬೆಳೆಗಾರರಿಗೆ ತರಬೇತಿ ನೀಡಲಾಗಿದೆ ಎಂದು ತೋಟಗಾರಿಕಾ ಉಪ ನಿರ್ದೆಶಕ ಹೇಳಿದ್ದಾರೆ.

ಏಕಕಾಲದ ಔಷಧ ಬಳೆಕೆಯಿಂದ ನಿಯಂತ್ರಣ ಸಾಧ್ಯ:ಎಲೆಚುಕ್ಕಿ ರೋಗಕ್ಕೆ ವಿಜ್ಞಾನಿಗಳು ತಿಳಿಸಿದಂತೆ ಇಲಾಖೆಯು ಮ್ಯಾಂಗೊಜಪ್ ಪ್ಲಸ್, ಎಕ್ಸಕ್ಲೊಜಲ್ ಪ್ಲಸ್ ಹಾಗೂ ಕಾರ್ಬಜನ್ ಔಷಧ ನೀಡಲಾಗುತ್ತಿದೆ. ಒಂದೂವರೆ ಹೆಕ್ಟೇರ್​​ ಪ್ರದೇಶಕ್ಕೆ ನಾಲ್ಕು ಸಾವಿರದಷ್ಡು ಉಚಿತ ಔಷಧವನ್ನು ನೀಡುತ್ತಿದ್ದೇವೆ. ಈ ರೋಗವನ್ನು ಹತೋಟಿ ಮಾಡಬೇಕಾದರೆ, ಎಲ್ಲರೂ ಒಟ್ಟಿಗೆ ಔಷಧವನ್ನು ಸಿಂಪಡಣೆ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದ್ದಾರೆ.

ಪರಿಹಾಕ್ಕೆ ಚಿಂತನೆ :ಅಡಕೆ ಟಾಸ್ಕ್ ಫೋರ್ಸ್​ನ ಅಧ್ಯಕ್ಷರಾದ ಆರಗ ಜ್ಞಾನೇಂದ್ರ ಅವರು ಹಾಳಾದ ಅಡಕೆ ತೋಟದವರಿಗೆ ಧನ ಸಹಾಯ ಮಾಡುವ ಕುರಿತು ಸಿಎಂ ಜೊತೆ ಚರ್ಚೆ ನಡೆಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಡಕೆ ತೋಟಗಳಿಗೆ ಬಾಧಿಸುತ್ತಿದೆ ಎಲೆ ಚುಕ್ಕಿ ರೋಗ: ಸಂಕಷ್ಟದಲ್ಲಿ ಬೆಳೆಗಾರರು..!

ABOUT THE AUTHOR

...view details