ಶಿವಮೊಗ್ಗ :ಮಲೆನಾಡಿನ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ನದಿಗಳೆಲ್ಲ ತುಂಬಿ ಹೋಗಿದ್ದು, ರೈಲು ಸೇರಿದಂತೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಳೆಯಿಂದ ರೈಲು ಸಂಚಾರಕ್ಕೆ ತಡೆ :ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ತಾಲೂಕಿನ ಕಾನ್ಲೆ ಗ್ರಾಮದ ಬಳಿ ರೈಲು ಹಳಿಯ ಮೇಲೆ ನೀರುನಿಂತ ಕಾರಣ ರೈಲು ಸಂಚಾರವನ್ನು ಸಾಗರ ಪಟ್ಟಣಕ್ಕೆ ಕೊನೆ ಮಾಡಲಾಗಿದೆ.
ಇನ್ನು, ತಾಳಗುಪ್ಪಕ್ಕೆ ಹೋಗಬೇಕಿದ್ದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಬೇರೆ ವ್ಯವಸ್ಥೆ ಮಾಡಿತ್ತು. ಸಾಗರ ತಾಲೂಕಿನದ್ಯಾಂತ ವಿಪರೀತ ಮಳೆ ಸುರಿಯುತ್ತಿದೆ. ಇದರಿಂದ ಅನೇಕ ಜನವಸತಿ ಪ್ರದೇಶಗಳು, ಗದ್ದೆ, ತೋಟಗಳಿಗೆ ನೀರು ನುಗ್ಗಿದೆ. ಇನ್ನೂ ಅನೇಕ ಗ್ರಾಮಗಳ ರಸ್ತೆ ಸಂಚಾರ ಬಂದ್ ಆಗಿದೆ.
ಪ್ರವಾಹದ ಆತಂಕದಲ್ಲಿ ಮಲೆನಾಡಿಗರು :ಕಳೆದೆರಡು ದಿನಗಳಿಂದ ಮಳೆ ಆರ್ಭಟ ಜೋರಾಗಿದೆ. ತುಂಗಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಆರಂಭವಾಗಿದೆ. ನಿನ್ನೆಯಿಂದ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ನದಿ ತೀರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಸಾಗರದಲ್ಲಿ ವರದಾ ನದಿ ಅಬ್ಬರ : ಶಾಸಕ ಹಾಲಪ್ಪ ಭೇಟಿ, ಪರಿಶೀಲನೆ
ಸಾಗರ ಪಟ್ಟಣದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ವರದಾ ನದಿ ಸೇರಿದಂತೆ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಪಟ್ಟಣದ ಶ್ರೀರಾಮಪುರ ಬಡಾವಣೆ, ವಿನೋಬನಗರ ಹಾಗೂ ಶ್ರೀರಾಮಪುರ ಬಡಾವಣೆಯ ಆಂಜನೇಯ ದೇವಾಲಯಕ್ಕೆ ನೀರು ನುಗ್ಗಿದೆ.
ಶಾಸಕರ ರೌಂಡ್ಸ್ :
ಶಾಸಕ ಹಾಲಪ್ಪ ಬೆಳ್ಳಂಬೆಳಗ್ಗೆ ನೀರು ನುಗ್ಗಿ ಅನಾಹುತಗಳಾದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಗರಸಭೆಯ ಅಧಿಕಾರಿಗಳು ಸೇರಿದಂತೆ ಎಸಿರವರ ಜೊತೆ ಪಟ್ಟಣದ ರೌಂಡ್ಸ್ ಹಾಕಿದ್ದಾರೆ. ತಗ್ಗು ಪ್ರದೇಶದ ಜನರಿಗಾಗಿ ನಗರಸಭೆ ಪಕ್ಕದ ಮೈದಾನದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ನಗರಸಭೆ ವತಿಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಲಿಂಗನಮಕ್ಕಿಗೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು :ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಇಂದು 2 ಲಕ್ಷದ 42 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 1,577 ಮೀ.ಮೀಟರ್ ಮಳೆಯಾಗಿದೆ.
ಇದರಿಂದ ಜಲಾಶಯದ ನೀರಿನ ಮಟ್ಟ 1,800 ಅಡಿಗೆ ತಲುಪಿದೆ. ಇಂದು ಜಲಾಶಯಕ್ಕೆ 2 .55 ಅಡಿ ನೀರು ಬಂದಿದೆ. ಹೊಸನಗರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ನದಿ ಬೋರ್ಗರೆದು ಧುಮ್ಮುಕ್ಕಿ ಹರಿಯುತ್ತಿದೆ.
ಕಳೆದ 24 ಗಂಟೆಯಲ್ಲಿ ಮಳೆ ಬಂದ ತಾಲೂಕುವಾರು ವರದಿ ಇಂತಿದೆ:
ಶಿವಮೊಗ್ಗ-256.20 ಮಿ.ಮೀ.
ಭದ್ರಾವತಿ-277.40 ಮಿ.ಮೀ.
ತೀರ್ಥಹಳ್ಳಿ-839 ಮಿ.ಮೀ.
ಸಾಗರ-659 ಮಿ.ಮೀ.
ಶಿಕಾರಿಪುರ- 294 ಮಿ.ಮೀ.
ಸೊರಬ- 387.80 ಮಿ.ಮೀ.
ಹೊಸನಗರ-1577.20 ಮಿ.ಮೀ.
ಜಿಲ್ಲೆಯಲ್ಲಿ ಸರಾಸರಿ 613.17 ಮಿ.ಮಿ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ:
ತುಂಗಾ ಜಲಾಶಯ-