ಶಿವಮೊಗ್ಗ :ನಗರದ ಹೊರ ಭಾಗದ ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಆಹಾರದ ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಾಲ್ಕು ಸ್ಟಾರ್ಗಳ ಪತ್ರ ನೀಡಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ 4 ಸ್ಟಾರ್ ಪ್ರಶಸ್ತಿ ನೀಡಿದ FSSAI ಎಫ್ಎಸ್ಎಸ್ಎಐ(FSSAI) ಮಾನದಂಡ ಗೆದ್ದ ಶಿವಮೊಗ್ಗ ಕಾರಾಗೃಹ :ಪ್ರತಿ ಜೈಲಿನಂತಯೇ ಶಿವಮೊಗ್ಗದ ಕೇಂದ್ರ ಕಾರಾಗೃಹ ಸಹ ಎಫ್ಎಸ್ಎಸ್ಎಐನಲ್ಲಿ ನೋಂದಣಿಯಾಗಿದೆ. ಬೆಂಗಳೂರಿನ ಅಧಿಕಾರಿಯೊಬ್ಬರು ಭೇಟಿ ನೀಡಿ ಇಲ್ಲಿನ ಆಹಾರ ಗುಣಮಟ್ಟ, ತಯಾರಿಕಾ ವಿಧಾನ, ಆಹಾರ ತಯಾರಿಕೆಗೆ ಬಳಸುವ ಪದಾರ್ಥಗಳ ಗುಣಮಟ್ಟ, ಆಹಾರ ತಯಾರಿಕೆ ಮಾಡುವವರ ಶುಚಿತ್ವ ಹಾಗೂ ಆಹಾರದ ವಿತರಣೆ ಸೇರಿದಂತೆ ಆಹಾರ ಸರಬರಾಜು ಮಾಡುವವರನ್ನು ಪರೀಕ್ಷಿಸಿದ್ದರು. ಈ ಎಲ್ಲವನ್ನು ಪರಿಗಣಿಸಿ ಎಫ್ಎಸ್ಎಸ್ಎಐನಿಂದ ನಾಲ್ಕು ಸ್ಟಾರ್ಗಳ ಪ್ರಶಸ್ತಿ ನೀಡಲಾಗಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ 4 ಸ್ಟಾರ್ ಪ್ರಶಸ್ತಿ ನೀಡಿದ FSSAI ಕಾರಾಗೃಹದಲ್ಲಿ 600ಕ್ಕೂ ಅಧಿಕ ಕೈದಿಗಳಿದ್ದಾರೆ. ಇವರಿಗೆ ಪ್ರತಿದಿನ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ಸಂಜೆ ಊಟವನ್ನು ನೀಡಲಾಗುತ್ತದೆ. ಪ್ರತಿದಿನ ಬೆಳಗ್ಗೆ ದಿನಕ್ಕೆ ಒಂದರಂತೆ, ಪುಳಿಯೊಗರೆ, ಟೋಮ್ಯಾಟೊ ಬಾತ್, ಪಲಾವ್ ನೀಡಿದರೆ, ಮಧ್ಯಾಹ್ನ ಮುದ್ದೆ, ಚಪಾತಿ, ಅನ್ನ ವಿವಿಧ ಆಹಾರಗಳನ್ನು ನೀಡಲಾಗುತ್ತದೆ.
ಉಳಿದಂತೆ ಪ್ರತಿ ಮಂಗಳವಾರ ಒಂದು ಮೊಟ್ಟೆ ಹಾಗೂ ಶುಕ್ರವಾರ ಮಾಂಸದ ಊಟವನ್ನು ನೀಡಲಾಗುತ್ತಿದೆ. ಪ್ರತಿದಿನ ತಯಾರದ ಊಟವನ್ನು ಪರೀಕ್ಷಿಸಿ ಬಂಧಿಗಳಿಗೆ ನೀಡಲಾಗುತ್ತದೆ. ತಯಾರದ ಊಟವನ್ನು ಬಂಧಿಗಳು ತೆಗೆದುಕೊಂಡು ಹೋಗಿ ತಮಗೆ ಬೇಕಾದ ಸಮಯದಲ್ಲಿ ತಮ್ಮ ಸೆಲ್ನಲ್ಲಿಯೇ ತಿನ್ನುತ್ತಾರೆ. ಹೀಗೆ ಪ್ರತಿದಿನ ಕೇಂದ್ರ ಕಾರಾಗೃಹದಲ್ಲಿ 18 ಸಾವಿರ ಮಂದಿಗೆ ಉಪಹಾರ,ಊಟ ತಯಾರು ಮಾಡಲಾಗುತ್ತದೆ.
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ 4 ಸ್ಟಾರ್ ಪ್ರಶಸ್ತಿ ನೀಡಿದ FSSAI ಸಂತಸ ತಂದಿದೆ :ನಮ್ಮ ಜೈಲಿನಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಿ ಬಂಧಿಗಳಿಗೆ ನೀಡಲಾಗುತ್ತದೆ. ಎಫ್ಎಸ್ಎಸ್ಎಐನಿಂದ ನೀಡಿದ ಎಲ್ಲಾ ಹಂತದಲ್ಲೂ ಸಹ ನಾವು ಉತ್ತಮವಾಗಿಯೇ ಕಾರ್ಯ ಮಾಡಿದ್ದೇವೆ. ನಮ್ಮ ಜೈಲರ್ಗಳು ಸೇರಿದಂತೆ ಇತರೆ ಎಲ್ಲಾ ಸಿಬ್ಬಂದಿ ಸಹ ಉತ್ತಮವಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ನಾವು 5 ಸ್ಟಾರ್ಗಳ ನಿರೀಕ್ಷೆಯಲ್ಲಿದ್ದೆವು. ಆದರೆ, ನಮಗೆ ಈಗ 4 ಸ್ಟಾರ್ ಸಿಕ್ಕಿದೆ.
ಇದರಲ್ಲಿ ಎಫ್ಎಸ್ಎಸ್ಎಐ ಅಧಿಕಾರಿಗಳ ತೀರ್ಮಾನ ಅಂತಿಮವಾಗಿರುತ್ತದೆ. ಇದರಿಂದ ನಾವು ಮುಂದೆ 5 ಸ್ಟಾರ್ಗಳು ಬರುವಂತೆ ನೋಡಿಕೊಳ್ಳುತ್ತೇವೆ ಎಂದು ಜೈಲಿನ ಸೂಪರಿಂಟೆಂಡೆಂಟ್ ಮಹೇಶ್ ಜಿಗಣಿ ಹೇಳಿದರು.
ಇದನ್ನೂ ಓದಿ: ಸಿಸಿಬಿ ಪೊಲೀಸರಿಂದ ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ : 27 ಮಂದಿ ಅಕ್ರಮ ವಲಸಿಗರು ಪತ್ತೆ..