ಕರ್ನಾಟಕ

karnataka

ETV Bharat / state

ಸ್ವಾತಂತ್ರ್ಯ ಹೋರಾಟಗಾರರ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಡಿಸಿ - ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ,

ಶಿವಮೊಗ್ಗದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಸ್ವಾತಂತ್ರ್ಯ ಹೋರಾಟದ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾಲನೆ ನೀಡಿದರು.

freedom struggles rare photographic, freedom struggles rare photographic exhibition, freedom struggles rare photographic exhibition in Shivamogga, Shivamogga news, ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ, ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ, ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ, ಶಿವಮೊಗ್ಗ ಸುದ್ದಿ,
ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಡಿಸಿ

By

Published : Mar 25, 2021, 9:55 AM IST

ಶಿವಮೊಗ್ಗ:ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ನಿಮಿತ್ತ ಆಯೋಜಿಸಿರುವ ಐದು ದಿನಗಳ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಉದ್ಘಾಟಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ಡಿಸಿ

ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ನಗರದ ಡಿವಿಎಸ್ ರಂಗಮಂದಿರದಲ್ಲಿ ಆಯೋಜಿಸಿರುವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಚಾಲನೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ

ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಘಟ್ಟಗಳು, ಶಶಸ್ತ್ರ ಬಂಡಾಯಗಳು, ನಾಡಿನ ಪ್ರಮುಖ ಹೋರಾಟಗಾರರ ಜೀವನ ಚಿತ್ರಣ ಇಲ್ಲಿವೆ. ಕಿತ್ತೂರು ದಂಗೆ, ಸುರಪುರ ದಂಗೆ, ಬಾದಾಮಿ ಬಂಡಾಯ, ಬ್ರಿಟಿಷರೊಂದಿಗೆ ಟಿಪ್ಪುಮತ್ತು ಹೈದರಾಲಿ ಹೋರಾಟದ ವಿವರಗಳು, ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಹೋರಾಟಗಾರರ ಮಾಹಿತಿಯನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಛಾಯಾಚಿತ್ರ ಪ್ರದರ್ಶನ

ಇನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗಾಂಧೀಜಿಯವರ ಹೋರಾಟಗಳಾದ ಅಸಹಕಾರ ಚಳವಳಿ, ಅಹಿಂಸಾ ಚಳವಳಿ, ಕಾನೂನು ಭಂಗ ಚಳವಳಿ ಸೇರಿದಂತೆ ವಿಶ್ವದ ಗಮನ ಸೆಳೆದ ಉಪ್ಪಿನ ಸತ್ಯಾಗ್ರಹ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ಪೂರ್ಣ ಮಾಹಿತಿಯನ್ನ ಛಾಯಾಚಿತ್ರದ ಮೂಲಕ ನೋಡುಗರನ್ನು ತಲುಪಿಸುವ ಕೆಲಸವನ್ನು ಕೇಂದ್ರ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಮಾಡಿರುವುದು ವಿಶೇಷ ವಾಗಿದೆ.

ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಳ್ಳಲು ಡಿಸಿ ಕರೆ

ಶೈಕ್ಷಣಿಕ ಕ್ಷೇತ್ರದಲ್ಲಿ ನಿಗದಿಪಡಿಸಿದ ಗುರಿ ತಲುಪಲಿಚ್ಚಿಸುವ ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.

ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಳ್ಳಲು ಡಿಸಿ ಕರೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಎಸ್​ಎಸ್ಎ​ಲ್ಸಿ​ ಮತ್ತು ಪಿಯುಸಿಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಕ್ಕಳ ಭವಿಷ್ಯದ ಬದುಕು ನಮ್ಮ ನಿರೀಕ್ಷೆಯಂತೆಯೆ ಇರಬೇಕು. ಡಾಕ್ಟರ್, ಇಂಜಿನಿಯರ್ ಆಗಿರಬೇಕು ಎಂಬಂತಹ ಆಸೆ- ಆಕಾಂಕ್ಷೆಗಳಿಂದಾಗಿ ಪೋಷಕರು ಮತ್ತು ಪೋಷಕರ ಆಸೆಯಂತೆ ಇಷ್ಟ ಇರದಿದ್ದರೂ ಒತ್ತಡದಲ್ಲಿ ದಿನ ಕಳೆಯುವ ವಿದ್ಯಾರ್ಥಿಗಳ ಮಾನಸಿಕ ಹೊಯ್ದಾಟ, ಚಡಪಡಿಕೆ ಹೇಳತೀರದ್ದಾಗಿರುತ್ತದೆ ಎಂದರು.

ಪೋಷಕರು ಮಕ್ಕಳಿಗೆ ಅಭ್ಯಾಸಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಡಬೇಕು. ಬದಲಾಗಿ ಒತ್ತಡ ಹೇರಬಾರದು. ಮಕ್ಕಳೂ ಕೂಡ ನಿರೀಕ್ಷಿತ ಗುರಿ ಸಾಧನೆಗೆ ಸತತ ಪರಿಶ್ರಮ. ನಿರಂತರ ಅಧ್ಯಯನ. ಸಕಾರಾತ್ಮಕ ಚಿಂತನೆ. ಉತ್ತಮ ಹವ್ಯಾಸಗಳನ್ನು ಹೊಂದಿರಬೇಕು. ಇದರಿಂದಾಗಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಲಿದೆ ಎಂದರು.

ABOUT THE AUTHOR

...view details