ಕರ್ನಾಟಕ

karnataka

ETV Bharat / state

ಪರಿಸರ ಪ್ರೇಮಿಗಳ ಮದುವೆ ವಿಶೇಷ: ವಿವಾಹಕ್ಕೆ ಬಂದವರಿಗೆ ಗಿಡ, ಪುಸ್ತಕ ಗಿಫ್ಟ್ - marriage news

ಶಿವಮೊಗ್ಗದಲ್ಲಿಂದು ನವ ಜೋಡಿಯೊಂದು ತಮ್ಮ ಮದುವೆ ಕಾರ್ಯಕ್ರಮದಲ್ಲಿ ಪರಿಸರ ಉಳಿಸೋ ವಚನ ಕೈಗೊಂಡಿದೆ. ಅಷ್ಟೇ ಅಲ್ಲದೆ, ಅಮೂಲ್ಯ ಗಿಡಗಳನ್ನು ಹಾಗೂ ಗಿಡಮರಗಳ ಮಾಹಿತಿವುಳ್ಳ ಪುಸ್ತಕವನ್ನು ಉಚಿತವಾಗಿ ವಿತರಿಸುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿ ವಿಶೇಷತೆ ಮೆರೆದಿದೆ.

newly married couple
newly married couple

By

Published : Jan 31, 2020, 7:07 PM IST

ಶಿವಮೊಗ್ಗ:ಮದುವೆಗೆ ಹೋದವರು ನವದಂಪತಿಗೆ ಗಿಫ್ಟ್ ನೀಡೋದು ಸಾಮಾನ್ಯ. ಆದ್ರೆ ಮದುವೆಗೆ ಬಂದವರಿಗೇ ಈ ನವಜೋಡಿ ಗಿಫ್ಟ್ ನೀಡಿದ ಅಪರೂಪದ ವಿವಾಹ ಕಾರ್ಯಕ್ರಮ ನಗರದಲ್ಲಿ ಜರುಗಿತು.

ಮದುವೆಗೆ ಬಂದವರಿಗೆ ಗಿಡ ಮತ್ತು ಪುಸ್ತಕ ಗಿಫ್ಟ್

ಬೆಂಗಳೂರಿನ ಶ್ರೀಕೃಷ್ಣ ಹಾಗೂ ಮೇಲ್ಪಾಲಿನ ನಿಕ್ಷುಬ ಇಬ್ಬರು ಇಂದು ತೀರ್ಥಹಳ್ಳಿಯ ಗಾಯಿತ್ರಿ ಮಂದಿರದಲ್ಲಿ ಸತಿ-ಪತಿ ಆದ್ರು. ಆಧುನಿಕತೆಯ ಅಬ್ಬರದ ಇಂದಿನ ದಿನಗಳಲ್ಲಿ, ನಾಡಿನ ಭಾಷೆ ನೆಲ ಜಲದ ಬಗ್ಗೆ ವಿಶಿಷ್ಟ ಪ್ರೀತಿ ಹೊಂದಿರುವ ಈ ನವ ದಂಪತಿ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಪರಿಸರ ಉಳಿಸೋ ವಚನ ಕೈಗೊಂಡು ಅಮೂಲ್ಯ ಗಿಡಗಳನ್ನು ಹಾಗೂ ಗಿಡಮರಗಳ ಮಾಹಿತಿವುಳ್ಳ ಪುಸ್ತಕವನ್ನು ಉಚಿತವಾಗಿ ವಿತರಿಸುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ಈ ವಿವಾಹೋತ್ಸವದಲ್ಲಿ ಗಿಡಗಳ ವಿತರಣೆ ಅಷ್ಟೇ ಅಲ್ಲದೆ ಮರಗಳ ಅದ್ಭುತ ಔಷಧಿ ಗುಣಗಳ ಮಾಹಿತಿ ಇರುವ ಬೆಳ್ಳಿ-ಬಂಗಾರ ಅನ್ನೋ ಪುಸ್ತಕವನ್ನು ಬಿಡುಗಡೆ ಮಾಡಿಸಿದರು. ಹಿರಿಯ ಆಯುರ್ವೇದ ತಜ್ಞ ಡಾ. ಪಿ. ಸತ್ಯನಾರಾಯಣ ಭಟ್ಟ ಬರೆದ ಈ ಪುಸ್ತಕವನ್ನು ಮಹಾನಸ ಆಯುರ್ವೇದ ಕೇಂದ್ರದ ಡಾ. ರೇಖಾ ಹಾಗೂ ಡಾ. ಅರ್ಚನಾ ಪ್ರಕಾಶನದವರು ಪ್ರಕಟಿಸಿದ್ದರು. ಇನ್ನು ಮದುವೆಗೆ ಬಂದವರಿಗೆಲ್ಲ ತಾಂಬೂಲವಾಗಿ ಉಚಿತವಾಗಿ ಈ ಬುಕ್ ವಿತರಿಸಲಾಯಿತು.

ವಧು-ವರನ ಈ ವಿನೂತನ ಕಾಯಕಕ್ಕೆ ಬಂಧುಮಿತ್ರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೀಕೃಷ್ಣ ಹಾಗೂ ನಿಕ್ಷುಬ ಅವರು ಗಿಡ ಹಾಗೂ‌ ಪುಸ್ತಕವನ್ನು ಉಡುಗರೆಯಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ABOUT THE AUTHOR

...view details