ಕರ್ನಾಟಕ

karnataka

ETV Bharat / state

ಟಾಕೀಸ್ ಸಿನಿವಾರದಲ್ಲಿ– ರಾಗ ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ - ಶಿವಮೊಗ್ಗ ಸಿನಿವಾರ ಸುದ್ದಿ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ಪ್ರೇಕ್ಷಕರಿಗೆ ಉಚಿತವಾಗಿ ರಾಗಾ ಸಿನಿಮಾ ತೋರಿಸಲಾಗುವುದು.

ರಾಗ ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ
ರಾಗ ಕನ್ನಡ ಚಿತ್ರ ಪ್ರದರ್ಶನ ಮತ್ತು ಸಂವಾದ

By

Published : Nov 30, 2019, 6:12 AM IST

ಶಿವಮೊಗ್ಗ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಟಾಕೀಸ್ ಸಿನಿವಾರ- ವಾರಾಂತ್ಯ ಸಿನಿ ಸಂಭ್ರಮದಲ್ಲಿ ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸಿದ ಪಿ.ಸಿ ಶೇಖರ್ ನಿರ್ದೇಶನದ ‘ರಾಗ’ ಕನ್ನಡ ಚಿತ್ರವನ್ನು ಉಚಿತ ಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಿದೆ.

ಶಿವಮೊಗ್ಗ ನಗರದ ನೆಹರೂ ಸ್ಟೇಡಿಯಂ ಬಳಿಯಿರುವ ವಾರ್ತಾಭವನದ ಎರಡನೇ ಮಹಡಿಯ ಮಿನಿ ಚಿತ್ರಮಂದಿರಲ್ಲಿ ಸಂಜೆ 5.30ಕ್ಕೆ ಸಿನಿಮಾ ಪ್ರದರ್ಶನಗೊಳ್ಳಲಿದೆ.

2018 ರಲ್ಲಿ ತೆರೆಕಂಡ ರಾಗ ಚಿತ್ರವು ಇಬ್ಬರು ದೃಷ್ಟಿ ವಿಕಲಚೇತನರ ನಡುವೆ ಅರಳುವ ಪ್ರೇಮಕಥೆಯಾಗಿದ್ದು, ನಾಯಕನಾಗಿ ಮಿತ್ರಾ ಮತ್ತು ನಾಯಕಿಯಾಗಿ ಭಾಮ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯರವರ ಸಂಗೀತ, ವೈದ್ಯರವರ ಛಾಯಗ್ರಹಣವಿದೆ.

ABOUT THE AUTHOR

...view details