ಶಿವಮೊಗ್ಗ:ವ್ಯಾಲ್ಯೂ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಅಮೃತ ನೋನಿಯಿಂದ, ಕೋವಿಡ್ ರೋಗಿಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಇಂದಿನಿಂದ ಪ್ರಾರಂಭಿಸಲಾಗಿದೆ.
ಶಿವಮೊಗ್ಗದಲ್ಲಿ ಕೋವಿಡ್ ಸೋಂಕಿತರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಅಮೃತ ನೋನಿ ತಂಡ ಆ್ಯಂಬುಲೆನ್ಸ್ ಒದಗಿಸಿದೆ. ಈ ಆ್ಯಂಬುಲೆನ್ಸ್ ಸೇವೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು. ನಗರದ ಚೇಬರ್ ಆಫ್ ಕಾಮರ್ಸ್ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಆ್ಯಂಬುಲೆನ್ಸ್ನಲ್ಲಿ ಆಕ್ಸಿಜನ್ ಕಿಟ್ ಸೇರಿದಂತೆ ಎಲ್ಲ ವೈದ್ಯಕೀಯ ಸೌಲಭ್ಯವನ್ನು ಒದಗಿಸಲಾಗಿದೆ. ಇದನ್ನು ಸೋಂಕಿತರು ಬಳಸಬಹುದಾಗಿದೆ. ಈ ಆ್ಯಂಬುಲೆನ್ಸ್ ಅನ್ನು ಅಮೃತ ನೋನಿಯ ಮುಖ್ಯಸ್ಥ ಶ್ರೀನಿವಾಸ್ ಸೇವಾ ಭಾರತಿಯ ಕೋವಿಡ್ ಸುರಕ್ಷಾ ಪಡೆಗೆ ಹಸ್ತಾಂತರ ಮಾಡಿದರು. ಈ ವೇಳೆ ಜಿ.ಪಂ ಸದಸ್ಯ ಕೆ.ಈ.ಕಾಂತೇಶ್, ಸಣ್ಣ ಕೈಗಾರಿಕ ನಿಗಮದ ಎಸ್.ದತ್ತಾತ್ತ್ರಿ ಸೇರಿದಂತೆ ಅಮೃತ ನೋನಿ ತಂಡ ಹಾಜರಿತ್ತು.