ಶಿವಮೊಗ್ಗ:ಕುಡಿದ ಮತ್ತಿನಲ್ಲಿ ನಾಲ್ವರು ಸ್ನೇಹಿತರು ಕಿರಿಕ್ ನಡೆಸಿ, ಕಾರು-ಬೈಕ್ಗಳಿಗೆ ಜಖಂ ಮಾಡಿರುವ ಘಟನೆ ಶಿವಮೊಗ್ಗದ ಹೊರವಲಯ ಸಾಗರ ರಸ್ತೆಯಲ್ಲಿ ನಡೆದಿದೆ.
ಘಟನಾ ಸ್ಥಳದಲ್ಲಿ ಕೆಲವರು ಗಾಯ ಶಿವಮೊಗ್ಗದ ಸಾಗರ ರಸ್ತೆಯಲ್ಲಿನ ಪೊಲೀಸ್ ಲೇಔಟ್ ಬಳಿ ವಿನೋಬ್ನಗರದ ನಾಲ್ವರು ಗೆಳೆಯರು ಕುಡಿದು ರಸ್ತೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಬೈಕ್ ಅನ್ನು ಅಡ್ಡಾದಿಡ್ಡಿ ಓಡಿಸುತ್ತಿದ್ದಾಗ ದಾರಿಹೋಕರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರೇಮ ವಿವಾಹವಾದರೆ 1 ಲಕ್ಷ ರೂ. ದಂಡ; ಕೊಡದಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ !
ಈ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಬಡಾವಣೆಯ ನಿವಾಸಿಗಳು ಯುವಕರ ಕೃತ್ಯವನ್ನು ಖಂಡಿಸಿ, ಪ್ರಶ್ನೆ ಮಾಡಿದ್ದಾರೆ. ಈ ವೇಳೆಗಾಗಲೇ ಒಂದು ಕಾರು, ಎರಡು ಬೈಕ್ ಜಖಂಗೊಳಿಸಿದ್ದಾರೆ. ವಿಷಯ ತಿಳಿದು ತುಂಗಾನಗರ ಪೊಲೀಸರು ಸ್ಥಳಕ್ಕಾಗಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ನಾಲ್ಬರು ಪರಾರಿಯಾಗಲು ಯತ್ನಿಸಿದ್ದಾರೆ. ಇದರಲ್ಲಿ ಆನಂದ ಎಂಬುವನನ್ನು ಬಂಧಿಸಲಾಗಿದೆ. ಉಳಿದ ಮೂವರಿಗೆ ಶೋಧಕಾರ್ಯ ನಡೆಸಲಾಗಿದೆ. ಸದ್ಯ ನಾಲ್ವರ ವಿರುದ್ದ ರಾಬರಿ ಪ್ರಕರಣವನ್ನು ತುಂಗಾನಗರ ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ದಾಖಲಿಸಿದ್ದಾರೆ.