ಕರ್ನಾಟಕ

karnataka

ಶಿವಮೊಗ್ಗದ ಹೋಟೆಲ್​ನಲ್ಲಿ‌ ಸ್ಟೀಮರ್​ ಸ್ಫೋಟ: ನಾಲ್ವರು ಸಿಬ್ಬಂದಿಗೆ ಗಾಯ

By

Published : Dec 11, 2019, 6:43 PM IST

ನಗರದ ದುರ್ಗಿಗುಡಿ ಬಡಾವಣೆಯಲ್ಲಿರುವ ಪ್ರತಿಷ್ಠಿತ ಶುಭಂ ಹೋಟೆಲ್​ನಲ್ಲಿ ಸ್ಟೀಮರ್​ ಬ್ಲಾಸ್ಟ್ ಆಗಿ ನಾಲ್ವರು ಕೆಲಸಗಾರರಿಗೆ ಗಾಯಗೊಂಡಿದ್ದಾರೆ.

steamer Blast
ಹೋಟೆಲ್​ನಲ್ಲಿ‌ ಸ್ಟಿಮರ್ ಬ್ಲಾಸ್ಟ್: ನಾಲ್ವರಿಗೆ ಗಾಯ

ಶಿವಮೊಗ್ಗ: ನಗರದ ದುರ್ಗಿಗುಡಿ ಬಡಾವಣೆಯಲ್ಲಿರುವ ಪ್ರತಿಷ್ಠಿತ ಶುಭಂ ಹೋಟೆಲ್​ನಲ್ಲಿ ಸ್ಟೀಮರ್​ ಬ್ಲಾಸ್ಟ್ ಆಗಿ, ನಾಲ್ವರು ಕೆಲಸಗಾರರು ಗಾಯಗೊಂಡಿದ್ದಾರೆ.

ಹೋಟೆಲ್​ನಲ್ಲಿ‌ ಸ್ಟೀಮರ್​ ಬ್ಲಾಸ್ಟ್: ನಾಲ್ವರಿಗೆ ಗಾಯ

ಸ್ಟೀಮರ್​​ನ ಪ್ರೆಜರ್ ಅನ್ನು ಆಗಾಗ್ಗೆ ಕಡಿಮೆ- ಜಾಸ್ತಿ ಮಾಡ್ತಾ ಇರಬೇಕಾಗುತ್ತದೆ. ಆದರೆ ಇದನ್ನು ಹೋಟೆಲ್​ ಸಿಬ್ಬಂದಿ ಸರಿಯಾಗಿ ನಿರ್ವಹಿಸದ ಕಾರಣ ಸ್ಫೋಟವಾಗಿದೆ ಎಂದು ಹೇಳಲಾಗ್ತಿದೆ.

ಸ್ಟೀಮರ್​ ಬ್ಲಾಸ್ಟ್ ಆಗಿ ನಾಲ್ಕು ಭಾಗವಾಗಿದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೀನಾಕ್ಷಮ್ಮ, ಸುರೇಶ್, ಪ್ರವೀಣ್​ ಸೇರಿದಂತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟದ ರಭಸಕ್ಕೆ ಅಡುಗೆ ಮನೆಯವರು ಮಾತ್ರವಲ್ಲದೇ ಊಟ ಮಾಡುತ್ತಿದ್ದವರು ತಟ್ಟೆ ಬಿಟ್ಟು ಹೊಟೆಲ್​ನಿಂದ ಹೊರ ಓಡಿ ಬಂದಿದ್ದಾರೆ. ಸದ್ಯ ಹೆಚ್ಚಿನ‌ ಅನಾಹುತವಾಗಿಲ್ಲವೆಂದು ತಿಳಿದು ಬಂದಿದೆ. ಸ್ಥಳಕ್ಕೆ‌ ದೊಡ್ಡಪೇಟೆಯ‌ ಎ‌ಎಸ್ಐ ಅಂತೋಣಿ ಭೇಟಿ‌ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದಾಗಿ ಸದ್ಯ ಹೋಟೆಲ್​ನ್ನು ಬಂದ್​​ ಮಾಡಲಾಗಿದೆ.

ABOUT THE AUTHOR

...view details