ಶಿವಮೊಗ್ಗ:ಹೊಸನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅವರಿಂದ 150 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
150 ಗ್ರಾಂ ಗಾಂಜಾ ಸಹಿತ ನಾಲ್ವರ ಬಂಧನ - Shimoga marijuana sale
ಹೊಸನಗರದ ಸಾಗರ ರಸ್ತೆಯ ಮುಳುಗದ್ದೆ ಸೇತುವೆಯ ಸಂಪೆಗದ್ದೆ ಬಳಿ ಖಚಿತ ಮಾಹಿತಿ ಮೇರೆಗೆ ಹೊಸನಗರ ಪಿಎಸ್ಐ ರಾಜೇಂದ್ರ ನಾಯ್ಕ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಅವರಿಂದ 150 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.
![150 ಗ್ರಾಂ ಗಾಂಜಾ ಸಹಿತ ನಾಲ್ವರ ಬಂಧನ Four arrested for selling marijuana: 150 grams of marijuana seized](https://etvbharatimages.akamaized.net/etvbharat/prod-images/768-512-8412869-584-8412869-1597376004101.jpg)
ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ: 150 ಗ್ರಾಂ ಗಾಂಜಾ ವಶ
ಹೊಸನಗರದ ಸಾಗರ ರಸ್ತೆಯ ಮುಳುಗದ್ದೆ ಸೇತುವೆಯ ಸಂಪೆಗದ್ದೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸನಗರ ಪಿಎಸ್ಐ ರಾಜೇಂದ್ರ ನಾಯ್ಕ ತಮ್ಮ ಸಿಬ್ಬಂದಿ ಜೊತೆ ದಾಳಿ ನಡೆಸಿದ್ದಾರೆ. ಈ ವೇಳೆ ಗಿರೀಶ್, ವಿನೋದ್, ಶರತ್ ಹಾಗೂ ವಿಕಾಸ್ ಎಂಬುವರನ್ನು ಬಂಧಿಸಲಾಗಿದೆ. ಇವರಿಂದ 150 ಗ್ರಾಂ ಗಾಂಜಾ ಹಾಗೂ ಬೈಕ್ಗಳನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯಲ್ಲಿ ಪೊಲೀಸರೊಂದಿಗೆ ಹೊಸನಗರದ ತಹಶೀಲ್ದಾರ್ ರಾಜೀವ್ ಎಸ್.ವಿ. ಭಾಗಿಯಾಗಿದ್ದರು.