ಶಿವಮೊಗ್ಗ:ಸಾಲಬಾಧೆಯಿಂದ ನೊಂದು ರೈತನೋರ್ವ ತನ್ನ ಸಂಬಂಧಿಕರ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಕಾಶ್ ಕದರಮಂಡಲಗಿ (32) ಎಂಬಾತ ಶಿಕಾರಿಪುರದ ಅಗ್ರಹಾರ ಮುಚ್ಚಡಿಯಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪ್ರಕಾಶ್ ಯೂನಿಯನ್ ಬ್ಯಾಂಕ್ನಿಂದ ₹12 ಲಕ್ಷ ರೂ. ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ನಲ್ಲಿ ₹5 ಲಕ್ಷ ರೂ ಹಾಗೂ ಒಂದಿಷ್ಟು ಕೈಸಾಲವನ್ನು ಮಾಡಿಕೊಂಡಿದ್ದ ಎನ್ನಲಾಗಿದೆ.
ಸಾಲಭಾದೆ : ವಿಷ ಸೇವಿಸಿ ರೈತನೋರ್ವ ಆತ್ಮಹತ್ಯೆ ಬ್ಯಾಂಕ್ನವರು ಸಾಲ ಮರುಪಾವತಿ ಮಾಡಬೇಕೆಂದು ಪೋನ್ ಮಾಡುತ್ತಿದ್ದರು. ಇದರಿಂದ ಪ್ರಕಾಶ್ ಬೇಸತ್ತು ಈ ಬಗ್ಗೆ ತನ್ನ ಸಂಬಂಧಿಕರ ಬಳಿ ಹೇಳಿಕೊಂಡಿದ್ದ. ಪ್ರಕಾಶ್ನ ಹೆಂಡ್ತಿಯು ಅಗ್ರಹಾರ ಮುಚ್ಚಡಿಯ ತನ್ನ ದೊಡ್ಡಮ್ಮನ ಮನೆಯಲ್ಲಿ ಹೆರಿಗೆಯಾಗಿ ಅಲ್ಲೇ ಇದ್ದಳು. ಈಕೆಯನ್ನು ಮಂಗಳವಾರ ನೋಡಲು ಬಂದಾಗ ಸಾಲದ ಬಗ್ಗೆ ಬೇಸರ ವ್ಯಕ್ತಪಡಿಸಿ, ತನ್ನ ಇಬ್ಬರು ಮಕ್ಕಳನ್ನು ನೀವೆ ನೋಡಿಕೊಳ್ಳಿ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿ ವಿಷ ಸೇವನೆ ಮಾಡಿದ್ದಾರೆ.
ಮಂಗಳವಾರ ಶಿರಾಳಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಪ್ರಕಾಶ್ ಸಾವನ್ನಪ್ಪಿದ್ದಾನೆ. ಇದರಿಂದ ಪ್ರಕಾಶ್ ಹೆಂಡತಿ, ಮೂರು ವರ್ಷದ ಹೆಣ್ಣು ಮಗು ಹಾಗೂ ಮೂರು ತಿಂಗಳ ಗಂಡು ಮಗು ಅನಾಥವಾಗಿದೆ. ಸದ್ಯ ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.