ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮದ ಸಶ್ಮಾನ ಜಾಗಕ್ಕಾಗಿ ಹಾಲಿ ಶಾಸಕ ಬಿ.ಕೆ.ಸಂಗಮೇಶ್ ಹಾಗೂ ಮಾಜಿ ಶಾಸಕ ಅಪ್ಪಾಜಿ ಗೌಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಭದ್ರಾವತಿಯಲ್ಲಿ ಸಶ್ಮಾನ ಜಾಗ ವಿವಾದ: ಹಾಲಿ - ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ - ಮಾಜಿ ಶಾಸಕ ಅಪ್ಪಾಜಿ ಗೌಡ
ತಾವರಘಟ್ಟ ಗ್ರಾಮದ ಸಶ್ಮಾನ ಜಾಗಕ್ಕಾಗಿ ಹಾಲಿ ಶಾಸಕ ಬಿ.ಕೆ.ಸಂಗಮೇಶ್ ಹಾಗೂ ಮಾಜಿ ಶಾಸಕ ಅಪ್ಪಾಜಿ ಗೌಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ತಾವರಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 29ರಲ್ಲಿ ಸರ್ಕಾರ ಗೋಮಾಳ ಜಾಗದಲ್ಲಿ 1 ಎಕರೆ 20 ಗುಂಟೆ ನೀಡಿತ್ತು. ಇಲ್ಲಿ ಗ್ರಾಮಕ್ಕಾಗಿ ಸಶ್ಮಾನ ನಿರ್ಮಾಣ ಮಾಡುವ ಯೋಜನೆ ಇತ್ತು. ಅಷ್ಟೇ ಅಲ್ಲದೆ, 5 ಎಕರೆ ಪ್ರದೇಶವಿದ್ದು, ಸಶ್ಮಾನ ಜಾಗವು ಸಹ ಒತ್ತುವರಿಯಾಗಿತ್ತು. ಈ ವಿಚಾರದ ಸಲುವಾಗಿ ಗ್ರಾಮಕ್ಕೆ ಬಂದ ಶಾಸಕ, ಸಶ್ಮಾನ ಜಾಗ ಬಿಟ್ಟು ಕೊಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪದ ಗ್ರಾಮಸ್ಥರು ಸಶ್ಮಾನ ಜಾಗ ಅಳತೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ, ಸ್ಥಳಕ್ಕೆ ಬಂದ ಮಾಜಿ ಶಾಸಕ ಅಪ್ಪಾಜಿ ಗೌಡ ರೈತರು ಹೊಟ್ಟೆಪಾಡಿಗೆ ಒತ್ತುವರಿ ಮಾಡಿದ್ದಾರೆ. ಬೇರೆ ಜಾಗ ಬಳಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಈ ವೇಳೆ, ಶಾಸಕ ಸಂಗಮೇಶ್ ಹಾಗೂ ಅಪ್ಪಾಜಿ ಗೌಡರವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶ ಮಾಡಿ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.