ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡ್ತಿದ್ದಾರೆ : ಕೆ ಎಸ್ ಈಶ್ವರಪ್ಪ - former minister eshwarappa statement against congress

ಅಗ್ನಿಪಥ್ ಯೋಜನೆ ಈ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇಂತಹ ಯೋಜನೆ ಇದೆ. ಈ ವಿಚಾರವನ್ನು ತಿರುಚಿ ಯುವಕರ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ. ಇದು ಕಾಂಗ್ರೆಸ್ ನ ದೇಶದ್ರೋಹದ ಕೆಲಸ. ಯುವಕರನ್ನು ಕಾಂಗ್ರೆಸ್ ಭಯೋತ್ಪಾದಕರನ್ನಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡ್ತಿದ್ದಾರೆ : ಕೆಎಸ್ ಈಶ್ವರಪ್ಪ
ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡ್ತಿದ್ದಾರೆ : ಕೆಎಸ್ ಈಶ್ವರಪ್ಪ

By

Published : Jun 19, 2022, 8:40 PM IST

Updated : Jun 19, 2022, 9:00 PM IST

ಶಿವಮೊಗ್ಗ : ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರನ್ನಾಗಿ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ. ಅಗ್ನಿಪಥ್ ಯೋಜನೆ ಗಲಭೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನಾಕಾರರು ರೈಲು ಸುಟ್ಟಿದ್ದಾರೆ. ಅಷ್ಟೇ ಅಲ್ಲ, ಇಡೀ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಅಧಿಕಾರದ ಲಾಲಸೆಯಿಂದ ಇಂದು ಕಾಂಗ್ರೆಸ್ ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಗ್ನಿಪಥ್ ಯೋಜನೆ ಈ ದೇಶದಲ್ಲಿ ಮಾತ್ರ ಅಲ್ಲ, ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಇಂತಹ ಯೋಜನೆ ಇದೆ. ಅಗ್ನಿಪಥ್ ವಿಚಾರ ತಿರುಚಿ ಯುವಕರ ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ನವರು ಮಾಡ್ತಿದ್ದಾರೆ. ಇದು ಕಾಂಗ್ರೆಸ್ ನ ದೇಶದ್ರೋಹದ ಕೆಲಸ. ನಿಮಗೆ ಅಸಮಾಧಾನ ಇದ್ದರೆ ಯುವಕರನ್ನೇಕೆ ದಾರಿ ತಪ್ಪಿಸುತ್ತಿದ್ದೀರಿ. ಯುವಕರ ರಾಷ್ಟ್ರಭಕ್ತಿಯನ್ನು ಈ ನಾಲ್ಕು ವರ್ಷಗಳು ಜಾಗೃತ ಮಾಡುತ್ತವೆ. ಆದರೆ ಕಾಂಗ್ರೆಸ್ ನವರು ಯುವಕರು ಭಯೋತ್ಪಾದಕರಾಗುತ್ತಾರೆ ಎನ್ನುತ್ತಾರೆ. ಈ ಪದ ಬಳಸಲು ನಿಮಗೆ ನಾಚಿಕೆ ಆಗಬೇಕು. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಈ ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಹರಿಹಾಯ್ದಿದ್ದಾರೆ.

ಕೆ ಎಸ್ ಈಶ್ವರಪ್ಪ ಹೇಳಿಕೆ

ರಾಹುಲ್ ಗಾಂಧಿ ಇಡಿ ವಿಚಾರಣೆ : ಪ್ರತಿಭಟನೆಗೆ ಅವಕಾಶ ಇದೆ. ತಪ್ಪಿದ್ದರೆ ವಿರೋಧ ಮಾಡಬಹುದು. ರಾಹುಲ್ ಗಾಂಧಿಯನ್ನು ವಿಚಾರಣೆಗೆ ಕರೆದರೆ ತಪ್ಪಾ ಎಂದು ಪ್ರಶ್ನಿಸಿದರು. ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇಬೇಡಿ ಅಂತಾ ನಿಮ್ಮ ಎಐಸಿಸಿ ಯಲ್ಲಿ ಒಂದು ನಿರ್ಣಯ ಮಾಡಿಬಿಡಿ. ಅದರಲ್ಲೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇಬೇಡಿ ಎಂದು ನಿರ್ಣಯ ಮಾಡಿ. ಹೇಗಾದರೂ ನಾವು ಅಧಿಕಾರಕ್ಕೆ ಬರಬೇಕು ಎನ್ನುವ ಲೆಕ್ಕಾ ಇಟ್ಟುಕೊಂಡು ಹೋಗುತ್ತಿರುವ ಹೋರಾಟಗಳಿಗೆ ರಾಜ್ಯದ ಜನ ಕ್ಷಮಿಸಲ್ಲ. ‌ಹೀಗಾಗಿಯೇ ಕಾಂಗ್ರೆಸ್ ಇಡೀ ದೇಶದಲ್ಲಿ ಸೋಲುತ್ತಿದೆ ಮುಂದೆಯೂ ಸೋಲುತ್ತೆ ಎಂದರು. ಇನ್ನೂ ಕಾಂಗ್ರೆಸ್ ಗಂಧ ಗಾಳಿಯೇ ಗೊತ್ತಿಲ್ಲದ ಸಿದ್ದರಾಮಯ್ಯ, ಡಿಕೆಶಿ, ನಲಪಾಡ್ ಅಂತಹವರ ಕೈಯಲ್ಲಿ ಸಿಕ್ಕಿ ಕಾಂಗ್ರೆಸ್ ನರಳುತ್ತಿದೆ ಎಂದರು.

ಡಿಕೆಶಿ ಪಠ್ಯ ಹರಿದ ತಕ್ಷಣ ಹೀರೋ ಆಗಲ್ಲ : ಪಠ್ಯಪುಸ್ತಕ ಹರಿದು ಆಕ್ರೋಶ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ನಾಲ್ಕು ಜನರನ್ನು ಸೇರಿಸಿಕೊಂಡು ಅವರ ಎದುರುಗಡೆ ಪಠ್ಯ ಪುಸ್ತಕ ಹರಿದು ಹೀರೋ ಆಗಲು ಹೋರಟಿದ್ದಿರಾ ಡಿ.ಕೆ ಶಿವಕುಮಾರ್ ಅವರೇ ಪಠ್ಯ ಪುಸ್ತಕ ಸರಸ್ವತಿ ಇದ್ದ ಹಾಗೆ. ಅದಕ್ಕೆ ಅವಮಾನ ಮಾಡಿದರೇ ರಾಜ್ಯದಲ್ಲಿ ಹೀರೋ ಆಗಲ್ಲಾ ಜೀರೋ ಆಗ್ತಿರಾ ಎಂದು ಹೇಳಿದರು.

ಪ್ರಧಾನಿಗಳು ರಾಜಕಾರಣ ಮಾಡಲು ಮೈಸೂರಿಗೆ ಬರುತ್ತಿದ್ದಾರೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಈಶ್ವರಪ್ಪ, ಮೋದಿ ರಾಜಕಾರಣ ಮಾಡದೇ ಏನು ಪೇಪರ್ ಮೆಂಟ್ ಹಂಚೋದಕ್ಕೆ ಬರುತ್ತಿದ್ದಾರಾ.. ಯುವಕರು ಆರೋಗ್ಯವಂತರಾಗಿ ಸದೃಢವಾಗಿ ಇರಲಿ ಅಂತಾ ಯೋಗ ಬಗ್ಗೆ ಪ್ರಚಾರ ಮಾಡಲು ಬರುತ್ತಿದ್ದಾರೆ. ಮೋದಿ ರಾಜಕಾರಣನೂ ಮಾಡ್ತಾರೆ, ಅಭಿವೃದ್ಧಿ ಕೆಲಸವನ್ನು ಮಾಡ್ತಾರೆ ಎಂದು ತಿರುಗೇಟು ನೀಡಿದರು.

ಓದಿ :ಕಂಪ್ಲಿಯ ಗಂಡುಗಲಿ ಕುಮಾರರಾಮನ ಕೋಟೆಯಲ್ಲಿ 39 ಫಿರಂಗಿ ಗುಂಡುಗಳು ಪತ್ತೆ!

Last Updated : Jun 19, 2022, 9:00 PM IST

For All Latest Updates

TAGGED:

ABOUT THE AUTHOR

...view details