ಕರ್ನಾಟಕ

karnataka

ETV Bharat / state

ಆನ್​​​​ಲೈನ್ ಶಿಕ್ಷಣಕ್ಕೆ ನನ್ನ ವಿರೋಧವಿದೆ: ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್

1 ರಿಂದ 7ನೇ ತರಗತಿವರೆಗೂ ಆನ್​​ಲೈನ್​ ಶಿಕ್ಷಣ ಒಳ್ಳೆಯದಲ್ಲ. ಅದಕ್ಕೆ ವ್ಯಕ್ತಿತಗತವಾಗಿ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Former minister Kimmane Ratnakar
ಮಾಜಿ ಸಚಿವ ಕಿಮ್ಮನೆ ರತ್ನಾಕರ್

By

Published : Jul 9, 2020, 2:14 PM IST

ಶಿವಮೊಗ್ಗ:ರಾಜ್ಯ ಸರ್ಕಾರ ಆರಂಭಿಸಿರುವ ಆನ್​​​ಲೈನ್ ಶಿಕ್ಷಣಕ್ಕೆ ವ್ಯಕ್ತಿಗತವಾಗಿ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1 ರಿಂದ 7ನೇ ತರಗತಿವರೆಗೂ ಆನ್​​​​ಲೈನ್​ ಶಿಕ್ಷಣ ಒಳ್ಳೆಯದಲ್ಲ. ಬೇರೆ ಯಾವ ವಿಧಾನದ ಮೂಲಕ ಹೋಮ್​​​ ವರ್ಕ್ ಅಥವಾ ಮನೆಯಲ್ಲಿ ಶಿಕ್ಷಣ ನೀಡಬಹುದು ಎಂಬುದರ ಕುರಿತು ಯೋಚನೆ ಮಾಡಬೇಕು ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್

ಈ ಕುರಿತು ಚರ್ಚಿಸಲು ಶಿಕ್ಷಣ ಸಚಿವರು, ಇದೇ ತಿಂಗಳು 17 ರಂದು ನಡೆಯುವ ಸಭೆಗೆ ಆಹ್ವಾನಿಸಿದ್ದಾರೆ. ಅಂದು ನನ್ನ ನಿರ್ದಿಷ್ಟ ಅಭಿಪ್ರಾಯವನ್ನು ತಿಳಿಸುತ್ತೇನೆ. ಈ ಹಿಂದೆ ನಾನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗಟ್ಟಿಧ್ವನಿಯಲ್ಲಿ ಮಾತನಾಡಿದ್ದೇನೆ. ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಎಷ್ಟೇ ಕಷ್ಟವಾದರೂ ನಡೆಸಬೇಕು ಎಂದೂ ಹೇಳಿರುವುದಾಗಿ ತಿಳಿಸಿದರು.

ABOUT THE AUTHOR

...view details