ಶಿವಮೊಗ್ಗ: ಮಾಜಿ ಸಿಎಂ, ವರ್ಣರಂಜಿತ ರಾಜಕಾರಣಿ ದಿವಂಗತ ಎಸ್. ಬಂಗಾರಪ್ಪನವರ 9ನೇ ಪುಣ್ಯ ಸ್ಮರಣೆಯ ಅಂಗವಾಗಿ ಪುತ್ರ ಕುಮಾರ್ ಬಂಗಾರಪ್ಪ ಇಂದು ವಿಶೇಷ ಪೂಜೆ ನೆರವೇರಿಸಿದರು.
ಮಾಜಿ ಸಿಎಂ ಬಂಗಾರಪ್ಪನವರ 9ನೇ ಪುಣ್ಯ ಸ್ಮರಣೆ: ಪುತ್ರ ಕುಮಾರ್ ನಮನ - ಬಂಗಾರಪ್ಪ ಸಮಾಧಿ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ 9ನೇ ಪುಣ್ಯ ಸ್ಮರಣೆ ಅಂಗವಾಗಿ ಇಂದು ಅವರ ಪುತ್ರ ಕುಮಾರ್ ಬಂಗಾರಪ್ಪ ನವರು ಸೊರಬದಲ್ಲಿರುವ ತಮ್ಮ ತಂದೆಯ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
Bangarappa Birth Anniversary
ಸೊರಬದ ಬಂಗಾರ ಧಾಮದಲ್ಲಿನ ಬಂಗಾರಪ್ಪನವರ ಸಮಾಧಿಗೆ ಬೆಳಗ್ಗೆಯೇ ತೆರಳಿ ವಿಶೇಷ ಪೂಜೆ ನಡೆಸಿದರು. ನಂತರ ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಉದ್ಯಾನವನದಲ್ಲಿನ ಬಂಗಾರಪ್ಪನವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಂಗಾರಪ್ಪ ಅಭಿಮಾನಿಗಳು ಹಾಜರಿದ್ದರು. ಬಂಗಾರಪ್ಪನವರ ಇಬ್ಬರೂ ಪುತ್ರರು ಪ್ರತ್ಯೇಕವಾಗಿ ಪೂಜೆ ಸಲ್ಲಿಸುತ್ತಾರೆ.