ಶಿವಮೊಗ್ಗ:ಜಿಲ್ಲೆಯ ಚೋರಡಿ ಅರಣ್ಯ ವಲಯದ ಉದ್ದನೂರು ಗ್ರಾಮದಲ್ಲಿ ಬಸವರಾಜ್ ಎಂಬ ವ್ಯಕ್ತಿಯೊಬ್ಬರ ಮೇಲೆ ಅರಣ್ಯ ಅಧಿಕಾರಿಗಳು ದರ್ಪ ಮೆರೆದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಂತರ ಮಲೆನಾಡಿಗರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿಗಳ ದರ್ಪದ ವಿಡಿಯೋ ವೈರಲ್: ಕ್ರಮಕ್ಕೆ ಆಗ್ರಹ.... - ಚೋರಡಿ ಅರಣ್ಯ ವಲಯದ ಉದ್ದನೂರು ಗ್ರಾಮದ ಬಸವರಾಜ್ ಮೇಲೆ ಅರಣ್ಯದಿಕಾರಿಗಳ ದರ್ಪ
ಶಿವಮೊಗ್ಗ ಜಿಲ್ಲೆಯ ಚೋರಡಿ ಅರಣ್ಯ ವಲಯದ ಉದ್ದನೂರು ಗ್ರಾಮದಲ್ಲಿ ಬಸವರಾಜ್ ಎಂಬ ವ್ಯಕ್ತಿಯೊಬ್ಬರ ಮೇಲೆ ಅರಣ್ಯ ಅಧಿಕಾರಿಗಳು ದರ್ಪ ಮೆರೆದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಂತರ ಮಲೆನಾಡಿಗರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿಗಳ ದರ್ಪದ ವಿಡಿಯೋ ವೈರಲ್
ಮೂಲಗಳ ಪ್ರಕಾರ ಬಸವರಾಜ್ ಎಂಬ ವ್ಯಕ್ತಿ ಅರಣ್ಯ ಭೂಮಿಯಲ್ಲಿ ನಾಲ್ಕು ಮರಗಳನ್ನ ಕಡಿದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ತನಿಖೆಗೆ ಬಂದಿದ್ದ ಡಿಆರ್ಎಫ್ ಓ ಗಿರೀಶ್ ಹಾಗೂ ಬಸವರಾಜ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಿರೀಶ್ ಮನೆಯ ಮುಂದಿನ ಅಂಗಳದಲ್ಲಿ ನಿಂತಿದ್ದ ಮಹಿಳೆಯನ್ನ ತಳ್ಳಿ ಮನೆಯ ಒಳಗೆ ನುಗ್ಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಘಟನೆಯಿಂದ ಆಕ್ರೋಶಿತರಾಗಿರುವ ಸಾರ್ವಜನಿಕರು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಈ ದೌರ್ಜನ್ಯ ನಡೆಸಿದ ಅರಣ್ಯ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.