ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲೂ ವಿಧಿ ವಿಜ್ಞಾನ ಕೇಂದ್ರ ತೆರೆಯಲಾಗುವುದು: ಗೃಹ ಸಚಿವ ಆರಗ ಜ್ಞಾನೇಂದ್ರ - ಈಟಿವಿ ಭಾರತ ಕನ್ನಡ

ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಯತ್ನ ಮಾಡಲಾಗುತ್ತಿದ್ದು ಈ ಕುರಿತು ಕೇಂದ್ರ ಗೃಹ ಮಂತ್ರಿ ಅವರೊಂದಿಗೆ ಮಾತನಾಡಿದ್ದಾಗಿ ಆರಗ ಜ್ಞಾನೇಂದ್ರ ಹೇಳಿದರು.

kn_smg_0
ಪೊಲೀಸ್​ ವಸತಿ ಶಂಕುಸ್ಥಾಪನೆ

By

Published : Oct 10, 2022, 10:52 PM IST

ಶಿವಮೊಗ್ಗ: ಶಿವಮೊಗ್ಗದಲ್ಲೂ ವಿಧಿ ವಿಜ್ಞಾನ ಕೇಂದ್ರ ತೆರೆಯಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಇಂದು ಶಿಕಾರಿಪುರದಲ್ಲಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ದಿ ನಿಗಮದಿಂದ ಸುಮಾರು‌ 20 ಕೋಟಿ ವೆಚ್ಚದ ಶಿಕಾರಿಪುರ ಪಟ್ಟಣದಲ್ಲಿ 60 ಹಾಗೂ ಶಿರಾಳಕೊಪ್ಪ ಪಟ್ಟಣದಲ್ಲಿ 12 ವಸತಿ ಗೃಹಕ್ಕೆ ಶಂಕುಸ್ಥಾಪನೆ ನೇರವೇರಿಸಿ‌ ಮಾತನಾಡಿದ ಅವರು, ನಮ್ಮ ಪೊಲೀಸರು ಹಾಗೂ ಅವರ ಕುಟುಂಬದವರು ವಾಸ ಮಾಡುವ ಮನೆ ಚೆನ್ನಾಗಿರಬೇಕು. ಮನೆ ಚನ್ನಾಗಿದ್ರೆ, ನಮ್ಮ ಪೊಲೀಸರು ನಮ್ಮದಿಯಿಂದ ಕೆಲಸ‌ ಮಾಡಬಹುದು ಎಂದರು.

ಕೆಲವೊಮ್ಮೆ ಪೊಲೀಸರು ಎರಡು ದಿನವಾದರೂ ತಮ್ಮ ಮನೆಗೆ ಹೋಗಲು ಆಗಲ್ಲ, ನಿದ್ದೆ ಮಾಡಲು ಆಗಲ್ಲ. ಊಟ ಸರಿಯಾಗಿ‌ ಮಾಡಲು ಆಗಲ್ಲ ಎಂದರು. ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರು, ಎಷ್ಟೇ ದುಡ್ಡು‌ಕೊಟ್ಟರೂ ಪೊಲೀಸ್ ಕೆಲಸ ಬೇಡಪ್ಪ ಎನ್ನುವಂತೆ ಆಗುತ್ತದೆ. ಇದರಿಂದ ಅವರು ಕೆಲಸ ಮಾಡುವ ಜಾಗ ಹಾಗೂ ಮನೆ ಸರಿಯಾಗಿದ್ರೆ, ನೆಮ್ಮದಿಯಿಂದ ಕೆಲಸ ಮಾಡಬಹುದಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದಕ್ಕೂ‌ ಮೊದಲು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು, ಪೊಲೀಸ್ ಇಲಾಖೆಗೆ ನಮ್ಮ‌ ಸರ್ಕಾರ ಆದ್ಯತೆ ನೀಡಿದೆ. ಇಂದು ಶಿಕಾರಿಪುರ ತಾಲೂಕಿನ ಸುಮಾರು 60 ಕುಟುಂಬಗಳಿಗೆ ಅನುಕೂಲ ಮಾಡಿಕೊಡಲು ವಸತಿ ನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕಾಗಿ ಗೃಹ ಸಚಿವರಿಗೆ ಅಭಿನಂದನೆಗಳು ಎಂದರು.

ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರಿಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ತಮ್ಮ ಮನೆಯಲ್ಲಿ ಸಾವು ಸಂಭವಿಸಿದ್ರು ಹೋಗಲಾದ ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ನಿರ್ವಹಿಸಿದೆ ಎಂದರು. ಈ ವೇಳೆ ಎಸ್ಪಿ ವಿಥುನ್ ಕುಮಾರ್. ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಸೇರಿ ಇತರರು ಹಾಜರಿದ್ದರು.

ಇದನ್ನೂ ಓದಿ:ಎಸ್​ಸಿ ಎಸ್​ಟಿ ಮೀಸಲು ಹೆಚ್ಚಳ ಅನುಷ್ಠಾನ ಪ್ರಕ್ರಿಯೆ ಬಗ್ಗೆ ಸರ್ಕಾರದ ಮೌನ ಸರಿಯಲ್ಲ: ಸಿದ್ದರಾಮಯ್ಯ

ABOUT THE AUTHOR

...view details