ಶಿವಮೊಗ್ಗ:ಮಲೆನಾಡಿನ ಆಹಾರ ಪದಾರ್ಥಗಳನ್ನು ನವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಾಗರದ ಅಣಲೆಕೊಪ್ಪದ ರಾಜಗುರು ಕಲ್ಯಾಣ ಕೇಂದ್ರದಲ್ಲಿ ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು.
ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ: ಜೋಳದ ರೊಟ್ಟಿ, ಕೊಟ್ಟೆ ಕಡುಬು ಸವಿದ ಜನ - ಸಂಪ್ರದಾಯಿಕ ಆಹಾರ ಮೇಳ
ಸಾಗರದ ಅಣಲೆಕೊಪ್ಪದ ರಾಜಗುರು ಕಲ್ಯಾಣ ಕೇಂದ್ರದಲ್ಲಿ ಮಲೆನಾಡಿನ ಸಂಪ್ರದಾಯಿಕ ಆಹಾರ ಮೇಳ ಆಯೋಜನೆ ಮಾಡಲಾಗಿತ್ತು. ಈ ಮೇಳದಲ್ಲಿ ಬಿಳಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಮಲೆನಾಡಿನ ಕೊಟ್ಟೆ ಕಡುಬು, ಜೋನಿ ಬೆಲ್ಲಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಇಡಲಾಗಿತ್ತು. ಮೇಳಕ್ಕೆ ಬಂದ ಜನ ಬಾಯಿ ಚಪ್ಪರಿಸಿಕೊಂಡು ಆಹಾರವನ್ನು ಸವಿದು ಫುಲ್ ಎಂಜಾಯ್ ಮಾಡಿದರು.
ಇಲ್ಲಿರುವ ಕೆಳದಿ ರಾಜಗುರು ಹೀರೆಮಠ ಈ ಆಹಾರ ಮೇಳವನ್ನು ಆಯೋಜನೆ ಮಾಡಿತ್ತು. ಕಣ್ಮರೆಯಾಗುತ್ತಿರುವ ಮಲೆನಾಡಿನ ವಿವಿಧ ಆಹಾರ ಪದಾರ್ಥಗಳನ್ನು ನವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಬಿಳಿ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯ, ಮಲೆನಾಡಿನ ಕೊಟ್ಟೆ ಕಡುಬು, ಜೋನಿ ಬೆಲ್ಲಾ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಇಡಲಾಗಿತ್ತು.
ಈ ಆಹಾರ ಪದಾರ್ಥಗಳಿಗೆ ಕಡಿಮೆ ದರವನ್ನು ನಿಗದಿ ಮಾಡಲಾಗಿತ್ತು. ಆಹಾರ ಮೇಳಕ್ಕೆ ಕುಟುಂಬ ಸಮೇತರಾಗಿ ಬಂದ ಜನ ಬಾಯಿ ಚಪ್ಪರಿಸಿಕೊಂಡು ಆಹಾರವನ್ನು ಸವಿಸಿ ಎಂಜಾಯ್ ಮಾಡಿದರು. ಇನ್ನು ಈ ಮೇಳ ಯಶಸ್ಸು ಆದ ಕಾರಣ ಪ್ರತಿ ಭಾನುವಾರ ಮೇಳವನ್ನು ನಡೆಸಲು ಕಳದಿ ಹೀರೆಮಠದ ಮಹೇಶ್ವರ ಶಿವಚಾರ್ಯ ಸ್ವಾಮಿಜೀಗಳು ಆದೇಶ ಮಾಡಿದ್ದಾರೆ.