ಕರ್ನಾಟಕ

karnataka

ETV Bharat / state

ಶಿವಮೊಗ್ಗ : ಮಳೆ ನಿಂತು 4-5 ದಿನಗಳ ನಂತರ ಐದು ಮನೆಗಳ ಕುಸಿತ

ಮನೆ ಕಳೆದು ಕೊಂಡವರು ಬೀದಿ ಬದಿ ಹೊವಿನ ವ್ಯಾಪಾರಿಗಳು. ಇವರೆಲ್ಲ ಅಂದು ದುಡಿದು ಅಂದೇ ತಿನ್ನಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದವರು. ಸ್ಥಳಕ್ಕೆ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಭೇಟಿ ನೀಡಿ, ಮನೆ ಕಳೆದುಕೊಂಡವರಿಗೆ ಊಟ, ಬಟ್ಟೆಗೆ ಸಹಾಯ ಮಾಡಿದ್ದಾರೆ..

ಐದು ಮನೆಗಳು ಕುಸಿತ
ಐದು ಮನೆಗಳು ಕುಸಿತ

By

Published : Jul 31, 2021, 6:51 PM IST

Updated : Jul 31, 2021, 7:53 PM IST

ಶಿವಮೊಗ್ಗ: ಮಳೆಯಿಂದಾಗಿ ನಗರದಲ್ಲಿ ಐದು ಮನೆಗಳು ಇಂದು ಕುಸಿತವಾಗಿವೆ. ನಗರದ ಸವಾರಲೈನ್ ರಸ್ತೆಯಲ್ಲಿನ ಐದು ಮನೆಗಳು ಇಂದು ಕುಸಿತ ಕಂಡಿವೆ. ಮಳೆ ನಿಂತರು ಮಳೆ ಹನಿ‌ ನಿಲ್ಲಲ್ಲ ಎಂಬಂತೆ ಮಳೆ ನಿಂತು ನಾಲ್ಕೈದು ದಿನಗಳ ಬಳಿಕ ಮನೆ ಕುಸಿತವಾಗಿವೆ.

ಐದು ಮನೆಗಳ ಕುಸಿತ

ಕುಸಿತಗೊಂಡಿದ್ದೆಲ್ಲವೂ ಹಳೆಯ ಮನೆಗಳಾಗಿವೆ. ಇವುಗಳು ಮಳೆಯಿಂದ ಸಂಪೂರ್ಣ ಶಿಥಿಲಗೊಂಡಿದ್ದವು. ಇದಕ್ಕೂ ಮೊದಲು ಮಳೆಯಿಂದ ಇದೇ ಭಾಗದಲ್ಲಿ ಎರಡು ಮನೆಗಳು ಕುಸಿತವಾಗಿದ್ದವು. ಹಾಗಾಗಿ, ಈ ಮನೆಗಳು ಸಹ ಕುಸಿತವಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಈ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಇದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಮನೆ ಕಳೆದು ಕೊಂಡವರು ಬೀದಿ ಬದಿ ಹೊವಿನ ವ್ಯಾಪಾರಿಗಳು. ಇವರೆಲ್ಲ ಅಂದು ದುಡಿದು ಅಂದೇ ತಿನ್ನಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದವರು. ಸ್ಥಳಕ್ಕೆ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಭೇಟಿ ನೀಡಿ, ಮನೆ ಕಳೆದುಕೊಂಡವರಿಗೆ ಊಟ, ಬಟ್ಟೆಗೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ : ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ..

Last Updated : Jul 31, 2021, 7:53 PM IST

ABOUT THE AUTHOR

...view details