ಕರ್ನಾಟಕ

karnataka

ETV Bharat / state

ಲಿಂಗನಮಕ್ಕಿ ಜಲಾಶಯ ಭರ್ತಿಗೆ 5 ಅಡಿ ಬಾಕಿ.. ಸುರಕ್ಷಿತ ಸ್ಥಳಕ್ಕೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ - Linganamakki reservoir

ಇಂದಿನ ನೀರಿನ ಮಟ್ಟ 1812.30ಕ್ಕೆ ತಲುಪಿದೆ. ನೀರಿನ ಒಳ ಹರಿವು 44 ಸಾವಿರ ಕ್ಯೂಸೆಕ್ ಇದೆ. ಇದೇ ರೀತಿ ಮಳೆ ಮುಂದುವರಿದ್ರೆ ನೀರು ಬಿಡುವುದು ಅನಿವಾರ್ಯ ಎಂದು ಎಚ್ಚರಿಕೆ ನಿಡಲಾಗಿದೆ..

linganamakki reservoir
ಲಿಂಗನಮಕ್ಕಿ ಜಲಾಶಯ ಭರ್ತಿಗೆ 5 ಅಡಿ ಬಾಕಿ: ನದಿ ಪಾತ್ರದ ಜನರಿಗೆ ಪ್ರವಾಹದ ಭೀತಿ

By

Published : Sep 22, 2020, 2:45 PM IST

ಹೊನ್ನಾವರ :ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದು ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದ್ರೆ ಜಲಾಶಯದ ಹಿತದೃಷ್ಟಿಯಿಂದ ನೀರು ಬಿಡುವುದು ಅನಿವಾರ್ಯ ಎಂದು ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.

ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಇಂದಿನ ನೀರಿನ ಮಟ್ಟ 1812.30ಕ್ಕೆ ತಲುಪಿದೆ. ನೀರಿನ ಒಳ ಹರಿವು 44 ಸಾವಿರ ಕ್ಯೂಸೆಕ್ ಇದೆ. ಇದೇ ರೀತಿ ಮಳೆ ಮುಂದುವರಿದ್ರೆ ನೀರು ಬಿಡುವುದು ಅನಿವಾರ್ಯ ಎಂದು ಎಚ್ಚರಿಕೆ ನಿಡಲಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಮಾತ್ರ ಬಾಕಿ ಉಳಿದಿದೆ.

ನದಿ ಪಾತ್ರದ ಜನರಿಗೆ ಸೂಚನೆ

ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ನೀರು ಗೇರುಸೋಪ್ಪಾ ಜಲಾಶಯಕ್ಕೆ ಹರಿದು ಬರುತ್ತದೆ. ಇದು ಬ್ಯಾಲೆನ್ಸಿಂಗ್ ಡ್ಯಾಮ್ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟಷ್ಟು ನೀರನ್ನು ಬಿಡುವುದು ಅನಿವಾರ್ಯ. ಹೀಗಾಗಿ, ಶರಾವತಿ ನದಿ ತೀರದ ಜನ ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ABOUT THE AUTHOR

...view details