ಶಿವಮೊಗ್ಗ: ಮಧು ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ ಐವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ನಿನ್ನೆ ಶಿವಮೊಗ್ಗದ ಹೂವಿನ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧು ಹೂವನ್ನು ಮನೆಯೊಂದಕ್ಕೆ ನೀಡಿ ವಾಪಸ್ ಆಗುವಾಗ ಆರು ಜನರು ಮೂರು ಬೈಕ್ ನಲ್ಲಿ ಬಂದು ಹಲ್ಲೆ ನಡೆಸಿದ್ದರು.
ತನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು ಹಾಗೂ ಮೂವರು ಚಾಕುವಿನಿಂದ ಇರಿಯಲು ಬಂದಿದ್ದರು ಎಂದು ಯುವಕ ಪೊಲೀಸರಿಗೆ ತಿಳಿಸಿದ್ದ. ಹಲ್ಲೆಗೆ ಒಳಗಾದ ನಂತರ ಮಧು ಮೆಗ್ಗಾನ್ ಆಸ್ಪತ್ರೆಗೆ ಬಂದು ದಾಖಲಾಗಿದ್ದ.