ಕರ್ನಾಟಕ

karnataka

ETV Bharat / state

ಕುವೆಂಪು ಕಾವ್ಯದ ಸ್ಫೂರ್ತಿ ಸಿಬ್ಬಲುಗುಡ್ಡೆ ಮತ್ಸ್ಯಧಾಮದಲ್ಲಿ ಮರಳು ಮಾಫಿಯಾ... - undefined

ಸಿಬ್ಬಲುಗುಡ್ಡೆ ಮತ್ಸ್ಯಧಾಮ ರಾಷ್ಟ್ರಕವಿ ಕುವೆಂಪು ಅವರಿಗೆ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ ಅಚ್ಚುಮೆಚ್ಚಿನ ಮಹತ್ವದ ಸ್ಥಳ. ಕುವೆಂಪು ಜೈವಿಕ ಅರಣ್ಯಧಾಮ ವ್ಯಾಪ್ತಿಯ ಪ್ರದೇಶದಲ್ಲಿದ್ದು, ಮತ್ಯ್ಸಧಾಮ ಪರಿಸರ ಕುವೆಂಪು ಸಾಹಿತ್ಯದಲ್ಲಿ ಅನೇಕ ಬಾರಿ ದಾಖಲಾಗಿದೆ.

ಸಿಬ್ಬಲುಗುಡ್ಡೆ ಮತ್ಸ್ಯಧಾಮ

By

Published : Apr 6, 2019, 1:35 PM IST

Updated : Apr 6, 2019, 9:28 PM IST

ಶಿವಮೊಗ್ಗ: ಪುರಾಣ ಪ್ರಸಿದ್ಧವಾಗಿರುವ ತೀರ್ಥಹಳ್ಳಿ ತಾಲೂಕಿನ ತುಂಗಾನದಿ ತೀರದ ಸಿಬ್ಬಲುಗುಡ್ಡೆ ಮತ್ಸ್ಯಧಾಮದ ಪರಿಸರ ಮರಳು ಮಾಫಿಯಾದ ಆರ್ಭಟಕ್ಕೆ ಸಿಕ್ಕಿ ವಿನಾಶದ ಅಂಚಿಗೆ ಸರಿಯುತ್ತಿದೆ.

ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದಲ್ಲಿ ವರ್ಣಿಸಲಾದ ಸಿಬ್ಬಲುಗುಡ್ಡೆ ಮತ್ಸ್ಯಧಾಮದ ಪರಿಸರ ಇದೀಗ ಮರಳ ಮಾಫಿಯಾದ ಮುಷ್ಟಿಗೆ ಸಿಕ್ಕು ಪಾರಂಪರಿಕ ಗತ ವೈಭವ ಕಳೆದುಕೊಳ್ಳುತ್ತಿದೆ. ಇಲ್ಲಿನ ಮತ್ಸ್ಯಧಾಮದ ಕುರಿತು ಸಾರ್ವಜನಿಕರಲ್ಲಿ ಅಗಾಧ ಧಾರ್ಮಿಕ ನಂಬಿಕೆ ಇದ್ದು, ಹರಕೆ ಹೊತ್ತು ದೇವರ ಮೀನುಗಳಿಗೆ ಮಂಡಕ್ಕಿ ಸುರಿದರೆ ದೇಹದಲ್ಲಿ ಉದ್ಬವವಾಗುವ ಗುಳ್ಳೆ ವಾಸಿಯಾಗುತ್ತದೆ (ಚಿಮ್ಮುಕುಲು) ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ. ಇಂದಿಗೂ ಭಕ್ತರು ಮತ್ಸ್ಯಧಾಮಕ್ಕೆ ಹರಕೆ ಹೊತ್ತು ನಂಬಿಕೆ ಈಡೇರಿಸಿಕೊಳ್ಳುತ್ತಾರೆ. ಆದರೆ, ಇದೀಗ ಧಾರ್ಮಿಕ ನಂಬಿಕೆಗೆ, ಪರಿಸರಕ್ಕೆ ಧಕ್ಕೆ ಆಗುವಂತೆ ಮರಳು ಮಾಫಿಯಾ ಸಕ್ರಿಯವಾಗಿದೆ.

ಸಿಬ್ಬಲುಗುಡ್ಡೆ ಮತ್ಸ್ಯಧಾಮ

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ , ಮೀನುಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ಸ್ಯಧಾಮಕ್ಕೆ ಆಗುತ್ತಿರುವ ಹಾನಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮರಳು ಮಾಫಿಯಾದ ಕುಕೃತ್ಯಕ್ಕೆ ಇಲಾಖೆಗಳು ಬೆಂಬಲವಾಗಿರುವುದು ನದಿ ಪಾತ್ರದ ಪರಿಸರದ ಹಾನಿಯ ದೃಶ್ಯಗಳು ಸಾಕ್ಷ್ಯ ಆಗಿವೆ.

ಇನ್ನೂ ಸಿಬ್ಬಲುಗುಡ್ಡೆ ಮತ್ಸ್ಯಧಾಮ ರಾಷ್ಟ್ರಕವಿ ಕುವೆಂಪು ಅವರಿಗೆ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿದ ಅಚ್ಚುಮೆಚ್ಚಿನ ಮಹತ್ವದ ಸ್ಥಳ. ಕುವೆಂಪು ಜೈವಿಕ ಅರಣ್ಯಧಾಮ ವ್ಯಾಪ್ತಿಯ ಪ್ರದೇಶದಲ್ಲಿದ್ದು, ಮತ್ಯ್ಸಧಾಮ ಪರಿಸರ ಕುವೆಂಪು ಸಾಹಿತ್ಯದಲ್ಲಿ ಅನೇಕ ಬಾರಿ ದಾಖಲಾಗಿದೆ.

ಮತ್ಸ್ಯಧಾಮ ಘೋಷಣೆ:
ಸಿಬ್ಬಲುಗುಡ್ಡೆ ಮತ್ಸ್ಯಧಾಮದಲ್ಲಿ ಅಪರೂಪದ ಮಹಶೀರ್ ಎಂಬ ಮೀನಿನ ಪ್ರಭೇದವಿದ್ದು, ಅವನತಿಯ ಅಂಚಿನಲ್ಲಿದೆ. ಇದೇ ಕಾರಣಕ್ಕೆ 2006 ರಲ್ಲಿ ಸರ್ಕಾರ ಪಾರಂಪರಿಕ ಮತ್ಸ್ಯಧಾಮ ಎಂದು ಘೋಷಿಸಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಮೀನುಗಾರಿಕೆಯನ್ನು ಸಹ ನಿಷೇಧಿಸಿದೆ. ಆದರೆ, ಸರ್ಕಾರದ ಸಂರಕ್ಷಣೆ ಕ್ರಮ ಶೂನ್ಯದ ಹಾದಿ ಹಿಡಿದಿದ್ದು, ದಬ್ಬಣಗದ್ದೆ ಗ್ರಾಮದ ಮರಳು ಕ್ವಾರೆಯ ಪರಿಸರ ಹಾನಿ ಕೃತ್ಯಗಳು ಕುವೆಂಪು ಅವರ ಪ್ರೀತಿಯ ಸಿಬ್ಬಲುಗುಡ್ಡೆಯ ಮತ್ಸ್ಯಧಾಮಕ್ಕೆ ಆತಂಕಕ್ಕೆ ತಂದಿದೆ. ಮತ್ಸ್ಯಧಾಮದಿಂದ ಕೂಗಳತೇ ದೂರದಲ್ಲಿಯೇ ಮರಳು ಗಣಿಗಾರಿಕೆ ಮಾಡಲಾಗುತ್ತಿದ್ದು, ಮತ್ಸ್ಯಧಾಮಕ್ಕೆ ಸಂಚಕಾರ ಎದುರಾಗಿದೆ.

ಸಿಬ್ಬಲುಗುಡ್ಡೆ ಮತ್ಸ್ಯಧಾಮ

ಸಿಬ್ಬಲುಗುಡ್ಡೆ ಮತ್ಸ್ಯಧಾಮ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾ.ಪಂ. ವ್ಯಾಪ್ತಿಯ ನಂಬಳ ಗ್ರಾಮದ ವ್ಯಾಪ್ತಿಯಲ್ಲಿದ್ದು, ಪಕ್ಕದ ದಬ್ಬಣಗದ್ದೆ ಗ್ರಾಮದ ತುಂಗಾನದಿ ಪಾತ್ರದಲ್ಲಿ ಮರಳು ಕ್ವಾರೆಗಳಿವೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನದಿಪಾತ್ರದಲ್ಲಿ ತಲಾ 12 ಎಕರೆ ಪ್ರದೇಶ ವಿಸ್ತೀರ್ಣದಂತೆ 7 ಕ್ವಾರೆಗಳನ್ನು ಗುರುತಿಸಿ ಗುತ್ತಿಗೆ ನೀಡಿದೆ. ಮತ್ಸ್ಯಧಾಮದ ಸನಿಹದಲ್ಲೇ ಕ್ವಾರೆ ಪ್ರದೇಶ ಗುರುತಾಗಿದೆ. ಕ್ವಾರೆ ಪ್ರದೇಶದಲ್ಲಿ ನದಿಪಾತ್ರ ದಂಡೆಗೆ ಹಾನಿ ಆಗದಂತೆ, ಪಾರಂಪರಿಕ ಪರಿಸರದ ವಿಸ್ಮಯ ಸ್ಥಳದ ಸಂರಕ್ಷಣೆ, ನದಿ ಹರಿವಿನ ಪ್ರದೇಶಕ್ಕೆ ತೊಂದರೆ ಆಗದಂತೆ ಎಚ್ಚರವಹಿಸುವ ಕುರಿತು ಕಡ್ಡಾಯ ನಿಯಮವಿದೆ.

ಕರ್ನಾಟಕ ರಾಜ್ಯ ಪರಿಸರ ಮಂಡಳಿ ಕ್ವಾರೆ ನಿರ್ವಹಣೆ ಕುರಿತು ಪಾಲಿಸಬೇಕಾದ 62 ಷರತ್ತುಬದ್ಧ ನಿಯಮಗಳನ್ನು ಉಲ್ಲೇಖಿಸಿ ಪರಿಸರ ವಿಮೋಚನಾ ಅನುಮತಿ ಪತ್ರ ನೀಡಿದೆ. ಆದರೆ, ನದಿ ಪಾತ್ರದಲ್ಲಿ ಷರತ್ತು ಬದ್ಧ ನಿಯಮಗಳು ಸಂಪೂರ್ಣ ಉಲ್ಲಂಘನೆ ಆಗಿದೆ.

Last Updated : Apr 6, 2019, 9:28 PM IST

For All Latest Updates

TAGGED:

ABOUT THE AUTHOR

...view details