ಶಿವಮೊಗ್ಗ: ದೇಶದ ಪ್ರಪ್ರಥಮ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿದ್ದ ಭದ್ರಾವತಿಯ ರಾಜಮ್ಮ(87) ನಿಧನರಾಗಿದ್ದಾರೆ. 1982ರಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿ ಇವರು ಕಾರ್ಯ ನಿರ್ವಹಿಸಿದ್ದರು. ಕಾರ್ಮಿಕರ ಪರವಾಗಿ ನಿರಂತರ ಹೋರಾಟ ನಡೆಸಿ 10 ಸಾವಿರ ಖಾಯಂ ಹಾಗೂ 3 ಸಾವಿರ ಗುತ್ತಿಗೆ ಕಾರ್ಮಿಕರ ಧ್ವನಿಯಾಗಿ ಸರಿಯಾದ ಸಮಯಕ್ಕೆ ಸಿಗಬೇಕಾದ ಸೌಲಭ್ಯವನ್ನು ಇವರು ಕೊಡಿಸಿದ್ದರು ಅನ್ನೋದು ಇಲ್ಲಿ ಸ್ಮರಣಾರ್ಹ.
ದೇಶದ ಕಾರ್ಮಿಕ ಸಂಘದ ಪ್ರಪ್ರಥಮ ಮಹಿಳಾ ಅಧ್ಯಕ್ಷೆ ಭದ್ರಾವತಿಯ ರಾಜಮ್ಮ ವಿಧಿವಶ - ಭದ್ರಾವತಿಯ ರಾಜಮ್ಮ ವಿಧಿವಶ
ರಾಜಮ್ಮನವರ ನಿಧನಕ್ಕೆ ಕಾರ್ಮಿಕ ಸಂಘದ ಹಾಲಿ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷರಾದ ಚಂದ್ರಹಾಸ್, ನರಸಿಂಹಾಚಾರ್ ಸೇರಿದಂತೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಸಂತಾಪ ಸಭೆ ನಡೆಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಭದ್ರಾವತಿಯ ರಾಜಮ್ಮ
ರಾಜಮ್ಮ ಅವಿವಾಹಿತರಾಗಿದ್ದರು. ಇವರು ಐದು ಜನ ಸಹೋದರಿಯರು ಹಾಗೂ 6 ಮಂದಿ ಸಹೋದರರನ್ನು ಅಗಲಿದ್ದಾರೆ. ಓರ್ವ ಕಾರ್ಮಿಕೆಯಾಗಿ ವಿಐಎಸ್ಎಲ್ ಸೇರಿ, ಕಾರ್ಮಿಕ ಸಂಘದ ಅಧ್ಯಕ್ಷೆಯಾಗಿ ಸಲ್ಲಿಸಿದ ಸೇವೆಯನ್ನು ಮರೆಯುವಂತಿಲ್ಲ.
ಸಂತಾಪ:ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷರಾದ ಚಂದ್ರಹಾಸ್, ನರಸಿಂಹಾಚಾರ್ ಸೇರಿದಂತೆ ಕಾರ್ಮಿಕ ಸಂಘದ ಪದಾಧಿಕಾರಿಗಳು ಸಂತಾಪ ಸಭೆ ನಡೆಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.