ಶಿವಮೊಗ್ಗ: ಮತ್ತೊರ್ವ ರೌಡಿ ಶೀಟರ್ ಮೇಲೆ ಇಲ್ಲಿನ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಶಿವಮೊಗ್ಗದ ರೌಡಿ ಶೀಟರ್ ಪ್ರವೀಣ ಅಲಿಯಾಸ್ ಮೋಟು ಪ್ರವೀಣ ಮೇಲೆ ಪೊಲೀಸರು ಇಂದು ಬೆಳಗ್ಗೆ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಮೋಟು ಪ್ರವೀಣ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೋಟು ಪ್ರವೀಣ ತನ್ನ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆಯುವಂತೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೂಬ್ಬರ ಕಾರಿಗೆ ಬೆಂಕಿ ಹಚ್ಚಿದ್ದ. ಈ ಪ್ರಕರಣದಲ್ಲಿ ಮೋಟು ಪ್ರವೀಣನನ್ನು ಬಂಧಿಸಲು ಹೋದಾಗ ಗ್ರಾಮಾಂತರ ಪೊಲೀಸ್ ಠಾಣೆಯ ಕಾನ್ಸಟೇಬಲ್ ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗ್ರಾಮಾಂತರ ಪಿಎಸ್ಐ ರಮೇಸ್ರವರು ಎಚ್ಚರಿಕೆ ನೀಡಿ, ಒಂದು ಸಾರಿ ಗಾಳಿಯಲ್ಲಿ ಗುಂಡು ಹಾರಿದ್ದಾರೆ. ಆದರೂ ಕೂಡ ಹಲ್ಲೆಗೆ ಯತ್ನಿಸಿದ ಮೋಟು ಪ್ರವೀಣನ ಕಾಲಿಗೆ ಪಿಎಸ್ಐ ರಮೇಶ್ ಗುಂಡು ಹೊಡೆದಿದ್ದಾರೆ.