ಕರ್ನಾಟಕ

karnataka

ETV Bharat / state

ಭದ್ರಾವತಿಯ ಅಜ್ಜಿಗುಡ್ಡ ಕಾಡಿಗೆ ಬೆಂಕಿ: ಅಪಾರ ಅರಣ್ಯ ಸಂಪತ್ತು ನಾಶ - ಭದ್ರಾವತಿ ತಾಲೂಕಿನ ಅಜ್ಜಿಗುಡ್ಡ ಕಾಡಿಗೆ ಬೆಂಕಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಜ್ಜಿಗುಡ್ಡ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು, ಹತ್ತಾರು ಎಕರೆ ಅರಣ್ಯ ನಾಶವಾಗಿದೆ.

Fire at Ajjigudda jungle
ಭದ್ರಾವತಿ ತಾಲೂಕಿನ ಅಜ್ಜಿಗುಡ್ಡ ಕಾಡಿಗೆ ಬೆಂಕಿ

By

Published : Feb 17, 2020, 8:58 PM IST

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಅಜ್ಜಿಗುಡ್ಡ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡು, ಹತ್ತಾರು ಎಕರೆ ಅರಣ್ಯ ನಾಶವಾಗಿದೆ.

ಭದ್ರಾವತಿ ತಾಲೂಕಿನ ಅಜ್ಜಿಗುಡ್ಡ ಕಾಡಿಗೆ ಬೆಂಕಿ

ಭದ್ರಾವತಿಯ ಅಂತರಗಂಗೆ ಗ್ರಾಮದಿಂದ ಉಬ್ರಾಣಿ ಕಡೆ ತೆರಳುವ ಮಾರ್ಗದಲ್ಲಿರುವ ಅಜ್ಜಿಗುಡ್ಡ ಕಾಡಿನ ರಸ್ತೆ ಪಕ್ಕದಲ್ಲಿಯೇ ಬೆಂಕಿ ಬಿದ್ದಿದೆ. ಕಾಡಿನಲ್ಲಿ ವೃಕ್ಷ ಸಂಪತ್ತು ಹಾಗೂ ಪ್ರಾಣಿಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಕಾಡಿಗೆ ಬೆಂಕಿ ಆವರಿಸಿಕೊಂಡ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದರೂ ಕೂಡ ಅಧಿಕಾರಿಗಳು ನಾಲ್ಕೈದು ಗಂಟೆ ಬಿಟ್ಟು ಬೆಂಕಿ ನಂದಿಸಲು ಆಗಮಿಸಿದ್ದಾರೆ. ವಾಚರ್​​ಗಳು, ಫಾರೆಸ್ಟರ್ ಸೇರಿದಂತೆ ಇತರೆ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಲು ಮೀನಾಮೇಷ ಎಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details