ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಇಬ್ಬರು ಮಾಜಿ ತಹಶೀಲ್ದಾರ್ ಸೇರಿ ಐವರ ವಿರುದ್ಧ ಎಫ್ಐಆರ್ - Shivamogga Tahsildars

ಜಾತಿ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸದೇ ಪ್ರಮಾಣ ಪತ್ರ ವಿತರಿಸಿದ ಆರೋಪದ ಮೇಲೆ ತಹಶೀಲ್ದಾರ್​ಗಳಾದ ಮಂಜುನಾಥ್ ಮತ್ತು ಕೊಟ್ರೇಶ್, ರೆವಿನ್ಯೂ ಇನ್​ಸ್ಪೆಕ್ಟರ್ ವಿಜಯಕುಮಾರ್, ಗ್ರಾಮ ಲೆಕ್ಕಿಗ ಸುರೇಶ್ ಅವರ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದೆ.

shivamogga
ಜಯನಗರ ಪೊಲೀಸ್ ಠಾಣೆ

By

Published : Sep 21, 2021, 7:22 AM IST

ಶಿವಮೊಗ್ಗ:ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಶಿವಮೊಗ್ಗ ತಾಲೂಕಿನ ಇಬ್ಬರು ಮಾಜಿ ತಹಶೀಲ್ದಾರ್​ಗಳು, ರೆವಿನ್ಯೂ ಇನ್​ಸ್ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿ ಮತ್ತು ಓರ್ವ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಉದ್ಯೋಗಕ್ಕಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಿ, ಪ್ರಕರಣ ದಾಖಲು ಮಾಡಲಾಗಿದೆ.

ತಹಶೀಲ್ದಾರ್ ಸೇರಿ ಐವರ ವಿರುದ್ಧ ಎಫ್ಐಆರ್

ಪ್ರಕರಣದ ವಿವರ:ಕೃಷ್ಣ ಎಂಬುವವರು ಕೆಎಸ್​ಆರ್​ಟಿಸಿ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಾವು ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದರು. ಇದರ ಸಿಂಧುತ್ವ ಪರಿಶೀಲನೆ ನಡೆಸಿದಾಗ ಜಾತಿ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಇರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಚಾಲಕ ಕೃಷ್ಣ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನು, ಜಾತಿ ಪ್ರಮಾಣಪತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸದೇ ಪ್ರಮಾಣ ಪತ್ರ ವಿತರಿಸಿದ ಆರೋಪದ ಮೇಲೆ ತಹಶೀಲ್ದಾರ್​ಗಳಾದ ಮಂಜುನಾಥ್ ಮತ್ತು ಕೊಟ್ರೇಶ್, ರೆವಿನ್ಯೂ ಇನ್​ಸ್ಪೆಕ್ಟರ್ ವಿಜಯಕುಮಾರ್, ಗ್ರಾಮ ಲೆಕ್ಕಿಗ ಸುರೇಶ್ ಅವರ ವಿರುದ್ಧ ಸಹ ಪ್ರಕರಣ ದಾಖಲು ಮಾಡಲಾಗಿದೆ.

2013ರಲ್ಲಿ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಸೂಚನೆ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ABOUT THE AUTHOR

...view details