ಶಿವಮೊಗ್ಗ: ಕೊರೊನಾ ಲಾಕ್ಡೌನ್ನಿಂದಾಗಿ ಶಿವಮೊಗ್ಗದ 5 ವರ್ಷದ ಹೆಣ್ಣು ಮಗುವೊಂದು ಬೆಂಗಳೂರಿನಲ್ಲಿ ಸಿಲುಕಿಕೊಂಡು ತನ್ನ ತಾಯಿಯನ್ನು ನೋಡಲು ಪ್ರತಿ ನಿತ್ಯ ಹಂಬಲಿಸುತ್ತಿತ್ತು. ತನ್ನ ತಾಯಿ ನೋಡದೇ ಅಳುತ್ತಿದ್ದ ಮಗುವನ್ನು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳ ಸಹಾಯದಿಂದ ಶಿವಮೊಗ್ಗದಲ್ಲಿರುವ ತಾಯಿಯ ಬಳಿಗೆ ಸೇರಿಸಲಾಗಿದೆ.
5 ವರ್ಷದ ದರ್ಶಿನಿಯ ತಾಯಿ ನಳಿನಿ ಶಿವಮೊಗ್ಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಗಳು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಲಾಕ್ಡೌನ್ ನಲ್ಲಿ ಸಿಲುಕಿಕೊಂಡಿದ್ದಳು. ತಾಯಿಯನ್ನು ನೋಡದೇ ಚಟಪಡಿಸುತ್ತಿದ್ದ ದರ್ಶಿನಿ, ನನಗೆ ಅಮ್ಮ ಬೇಕು ಎಂದು ನಿರಂತರವಾಗಿ ಪೋನ್ ಮಾಡಿ ಅಳುತ್ತಿದ್ದಳು. ಹೃದಯ ಸಂಬಂಧಿ ಕಾಯಿಲೆ ಇರುವ ಮಗು ಹೆಚ್ಚು ಅಳಬಾರದು, ಈ ರೀತಿ ಅಳತೊಡಗಿದೆರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ವೈದ್ಯರು ತಿಳಿಸಿದ್ದರು.