ಶಿವಮೊಗ್ಗ :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮನೆ ಮನೆಗೆ ಹೋಗಿ ಕೊರೊನಾ ವಿಚಾರವಾಗಿ ಜ್ವರ ಹಾಗೂ ತಾಪಮಾನ ತಪಾಸಣೆ ಮತ್ತು ಪಲ್ಸ್ ಆಕ್ಸಿಮೀಟರ್ ಪರೀಕ್ಷೆ ಮಾಡುವ ಕಾರ್ಯಕ್ರಮವನ್ನು ನಡೆಸಲಾಯಿತು.
ಆರೋಗ್ಯ ಹಸ್ತ ಅಭಿಯಾನ.. ಮನೆ ಮನೆಗೆ ತೆರಳಿ ಜ್ವರ ಮತ್ತು ಪಲ್ಸ್ ಆಕ್ಸಿಮೀಟರ್ ಪರೀಕ್ಷೆ.. - ಆರೋಗ್ಯ ಹಸ್ತ ಕಾರ್ಯಕ್ರಮ
ತಪಾಸಣೆ ನಡೆಸುವ ವೇಳೆಯಲ್ಲಿ ಯಾರಿಗಾದರೂ ಜ್ವರ ಹಾಗೂ ಕೊರೊನಾ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಂಡು ಬಂದರೆ ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗುತ್ತದೆ..
ಆರೋಗ್ಯ ಹಸ್ತ ಕಾರ್ಯಕ್ರಮ
ಈ ಕಾರ್ಯಕ್ರಮದಲ್ಲಿ ಇಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್ ಸಿ ಯೋಗೀಶ್ ನೇತೃತ್ವದಲ್ಲಿ ನಗರದ ಶೇಷಾದ್ರಿಪುರಂನಲ್ಲಿ ತಪಾಸಣೆ ನಡೆಸಲಾಯಿತು. ತಪಾಸಣೆ ನಡೆಸುವ ವೇಳೆಯಲ್ಲಿ ಯಾರಿಗಾದರೂ ಜ್ವರ ಹಾಗೂ ಕೊರೊನಾ ಸಂಬಂಧಿಸಿದ ಯಾವುದೇ ಲಕ್ಷಣಗಳು ಕಂಡು ಬಂದರೆ ಕೂಡಲೇ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗುತ್ತದೆ.
ಕೊರೊನಾ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದು ಯೋಗೀಶ್ ತಿಳಿಸಿದರು.