ಶಿವಮೊಗ್ಗ : ಲಾಕ್‌ಡೌನ್ ಸಡಿಲಗೊಂಡಿರುವುದರಿಂದ ನಗರದಲ್ಲಿ ಜನರ ಓಡಾಟ ಹೆಚ್ಚತೊಡಗಿದ್ದು ಕೊರೊನಾ ಹರಡುವ ಭೀತಿ ಶುರುವಾಗಿದೆ.
ಲಾಕ್‌ಡೌನ್ ಸಡಿಲಿಕೆಯಿಂದ ಹೆಚ್ಚಿದ ಜನ ಸಂಚಾರ: ಶಿವಮೊಗ್ಗದಲ್ಲಿ ಕೊರೊನಾ ಹರಡುವ ಭೀತಿ - Increased traffic in Shimoga
ಶಿವಮೊಗ್ಗ ಗ್ರೀನ್ ಝೋನ್ನಲ್ಲಿರುವುದರಿಂದ ನಗರದಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗಿದೆ. ಜೊತೆಗೆ ಸೋಮವಾರದಿಂದ ಮದ್ಯದಂಗಡಿಗಳು ತೆರೆದಿವೆ. ಹೀಗಾಗಿ ಜನರ ಅನಗತ್ಯ ಓಡಾಟ ಹೆಚ್ಚಾಗಿದ್ದು, ಕೊರೊನಾ ಹರಡುವ ಭೀತಿ ಎದುರಾಗಿದೆ.
ಶಿವಮೊಗ್ಗದಲ್ಲಿ ಕೊರೊನಾ ಹರಡುವ ಭೀತಿ
ಇನ್ನು ಹೊರ ಜಿಲ್ಲೆಗಳಿಂದಲೂ ಸಾವಿರಾರು ಜನ ಜಿಲ್ಲೆಗೆ ಆಗಮಿಸಿದ್ದು, ಪಕ್ಕದ ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳು ಕೊರೊನಾ ಬಾಧಿತವಾಗಿರುವುದರಿಂದ ಶಿವಮೊಗ್ಗಕ್ಕೂ ಕಂಟಕ ಎದುರಾಗುವ ಆತಂಕ ಶುರುವಾಗಿದೆ.