ಕರ್ನಾಟಕ

karnataka

ನೆರೆ ಹಾವಳಿಯಿಂದ ಕಂಗೆಟ್ಟ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ

By

Published : Aug 16, 2019, 10:37 AM IST

ಪ್ರವಾಹದಿಂದ ಇಷ್ಟು ದಿನ ನರಳಾಡಿದ ಸಂತ್ರಸ್ತರಿಗೆ ಸದ್ಯ ಮತ್ತೊಂದು ಆಘಾತ ಎದುರಾಗಿದ್ದು, ನೆರೆಯಿಂದ ಸಂಗ್ರಹವಾದ ತಾಜ್ಯದ ರಾಶಿ ನಗರದ ಬಡಾವಣೆಗಳಲ್ಲಿ ಸೃಷ್ಟಿಯಾಗಿದ್ದು ಸಾಂಕ್ರಾಮಿಕ ರೋಗ ಹರಡು ಸಂಭವ ಹೆಚ್ಚಾಗಿದೆ.

ಔಷದ ಸಿಂಪರಣೆಯ ಕಾರ್ಯ

ಶಿವಮೊಗ್ಗ :ನೆರೆಗೆ ಹಾನಿಗೊಳದಾದ ನಗರದ ಬಡಾವಣೆಗಳಲ್ಲಿ ಈಗ ಕಸದ ಪರ್ವತಗಳೇ ಸೃಷ್ಟಿಯಾಗಿವೆ. ಎಲ್ಲಿ ನೋಡಿದರೂ ಬಟ್ಟೆ, ಪೇಪರ್‌ನಂತ ತ್ಯಾಜ್ಯದ ರಾಶಿಗಳೇ ರಾರಾಜಿಸುತ್ತಿವೆ. ರೋಗ ರುಜಿನಗಳು ಹರಡುವ ಸಂಭವ ಹೆಚ್ಚಿರುವುದರಿಂದ ಪಾಲಿಕೆ ವತಿಯಿಂದ ಔಷಧ ಸಿಂಪರಣೆಯ ಕಾರ್ಯ ಭರದಿಂದ ಸಾಗುತ್ತಿದೆ.

ನೆರೆ ಹಾವಳಿಯಿಂದಾಗಿ ತೀವ್ರ ಹಾನಿಯಾಗಿರುವ ಬಡಾವಣೆಗಳಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ನೇತೃತ್ವದಲ್ಲಿ ಸ್ವಚ್ಚತಾ ಆಂದೋಲನ, ಕೀಟನಾಶ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸ್ವತಃ ಮೇಯರ್ ಮತ್ತು ಉಪ ಮೇಯರ್ ಬಿದಿಗೆ ಬ್ಲಿಚಿಂಗ್ ಪೌಡರ್ ಹಾಕುವ ಮೂಲಕ ಗಮನ ಸೆಳೆದರು.

ABOUT THE AUTHOR

...view details