ಕರ್ನಾಟಕ

karnataka

ETV Bharat / state

ದೆಹಲಿ ರೈತ ಚಳವಳಿ ಬೆಂಬಲಿಸಿ ಶಿವಮೊಗ್ಗದಲ್ಲಿ ರೈತರ ಉಪವಾಸ ಸತ್ಯಾಗ್ರಹ - ಶಿವಮೊಗ್ಗ ಸುದ್ದಿಒ

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಗಾಂಧಿ‌ ಪಾರ್ಕ್​ನಲ್ಲಿ ಎರಡು ರೈತ ಬಣಗಳು ಪ್ರತಿಭಟನೆ ನಡೆಸಿದವು. ಸಂಯುಕ್ತ ಕಿಸಾನ್ ಮೋರ್ಚಾ ಗಾಂಧಿ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರೆ, ಇನ್ನೊಂದು ಬಣ ಗಾಂಧಿ ಪ್ರತಿಮೆ ಆವರಣದ ಎದುರು ಪ್ರತಿಭಟನೆ ನಡೆಸಿತ್ತು.

shimoga
ಶಿವಮೊಗ್ಗ

By

Published : Jan 30, 2021, 4:16 PM IST

ಶಿವಮೊಗ್ಗ: ದೆಹಲಿಯಲ್ಲಿ ಕಳೆದ 45 ದಿನಗಳಿಂದ ಕೇಂದ್ರ ಸರ್ಕಾರದ ವಿರುದ್ದ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಬೆಂಬಲಿಸಿ, ಶಿವಮೊಗ್ಗದಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ನಗರದ ಗಾಂಧಿ ಪಾರ್ಕ್​ನ ಗಾಂಧಿ ಪ್ರತಿಮೆ ಎದುರು ಇಂದು ಬೆಳಗ್ಗೆಯಿಂದ ಸಂಜೆ ತನಕ ಉಪವಾಸ ಸತ್ಯಗ್ರಹ ನಡೆಸುತ್ತಿದ್ದಾರೆ. ಇಂದು ಗಾಂಧಿ ಹುತಾತ್ಮರಾದ ದಿನವಾದ ಹಿನ್ನೆಲೆಯಲ್ಲಿ ದೇಶದ ಆಡಳಿತ ನಡೆಸುತ್ತಿರುವವರ ವಿರುದ್ದ ಉಪವಾಸ ಪ್ರತಿಭಟನೆ ನಡೆಸುತ್ತಿದ್ದಾರೆ.

ಉಪವಾಸ ಸತ್ಯಗ್ರಹದಲ್ಲಿ ರೈತ ಸಂಘಕ್ಕೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು ಭಾಗಿಯಾಗಿದ್ದವು. ದೆಹಲಿಯ ಹೋರಾಟದಲ್ಲಿ ಕೇವಲ ರೈತರಷ್ಟೇ ಅಲ್ಲದೆ, ನಾವೆಲ್ಲಾ ಅವರ ಜೊತೆಗಿದ್ದೇವೆ. ಇದರಿಂದ ದೇಶದ ಅನ್ನದಾತ ರೈತ ತಮ್ಮ ಪ್ರತಿಭಟನೆಯನ್ನು ಮುಂದುವರೆಸಬೇಕು. ಅವರಿಗೆ ನಾವೆಲ್ಲಾ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಮಾಡಿದರು.

ರೈತರಿಂದ ಎರಡು ಕಡೆ ಪ್ರತಿಭಟನೆ:

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಗಾಂಧಿ‌ ಪಾರ್ಕ್​ನಲ್ಲಿ ಎರಡು ರೈತ ಬಣಗಳು ಪ್ರತಿಭಟನೆ ನಡೆಸಿದರು. ಸಂಯುಕ್ತ ಕಿಸಾನ್ ಮೋರ್ಚಾ ಗಾಂಧಿ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದರೆ, ಇನ್ನೊಂದು ಬಣ ಗಾಂಧಿ ಪ್ರತಿಮೆ ಆವರಣದ ಎದುರು ಪ್ರತಿಭಟನೆ ನಡೆಸಿದ್ದು, ವಿಶೇಷವಾಗಿತ್ತು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಯ ವಿರುದ್ದ ದೆಹಲಿಯಲ್ಲಿ ರೈತರು ಸತತ‌ 45 ದಿನಗಳಿಂದ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ರೈತರ‌ ಚಳುವಳಿಯನ್ನು ಹತ್ತಿಕ್ಕುವ ಸಲುವಾಗಿ ಶಾಂತಿಯುತ ಪ್ರತಿಭಟನೆಯನ್ನು‌ ಹಿಂಸಾತ್ಮಕವಾಗಿ ಮಾಡಿದರು. ಬಿಜೆಪಿಯವರೇ ತಮ್ಮ ಜೊತೆ ಇರುವವರನ್ನು ಕಳುಹಿಸಿ ಪ್ರತಿಭಟನೆಯನ್ನು ಹಿಂಸಾತ್ಮಕವಾಗಿ ಮಾಡಿದ್ದಾರೆ. ಆದರೆ ನಮ್ಮ ರೈತ ಚಳುವಳಿಯು ಕಾಯ್ದೆ ವಾಪಸ್ ಪಡೆಯುವವರೆಗೂ ನಡೆಯುತ್ತಲೇ ಇರುತ್ತದೆ ಎಂದು‌ ರೈತ‌ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details