ಕರ್ನಾಟಕ

karnataka

ETV Bharat / state

ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಹೆಚ್.ಆರ್.ಬಸವರಾಜಪ್ಪ

ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್​ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

farmers protest against state and central govt in shivamogg
ರೈತರ ಸಾಲ ವಸೂಲಿಗೆ ನಿಮಗೆ ಹಕ್ಕಿಲ್ಲ

By

Published : Jan 23, 2020, 2:28 PM IST

ಶಿವಮೊಗ್ಗ:ಕೇಂದ್ರ, ರಾಜ್ಯ ಸರ್ಕಾರಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ರೈತರ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್​ಗಳ ಮೂಲಕ ಒತ್ತಡ ಹೇರುವ ನೈತಿಕ ಹಕ್ಕಿಲ್ಲ ಎಂದು ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

ರೈತರ ಸಾಲ ವಸೂಲಿ ಮಾಡುವ ನೈತಿಕ ಹಕ್ಕು ನಿಮಗಿಲ್ಲ: ಬಸವರಾಜಪ್ಪ

ಇಲ್ಲಿನ ಸಹಕಾರಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ ಅಧಿಕಾರಿಗಳು ರೈತರ ಟ್ರ್ಯಾಕ್ಟರ್​ಗಳ ಜಪ್ತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಪಿಎಲ್​ಡಿ ಬ್ಯಾಂಕ್​ ಎದುರು ಪ್ರತಿಭಟನೆ ನಡೆಸಿದವು.

ಕೇಂದ್ರ, ರಾಜ್ಯ ಸರ್ಕಾರಗಳು ಬ್ಯಾಂಕ್​ಗಳ ಮೂಲಕ ರೈತರ ಬದುಕಿನ ಜೊತೆ ಆಟವಾಡುತ್ತಿವೆ. ಸ್ವಾಮಿನಾಥನ್​ ವರದಿ ಜಾರಿ, ಕೃಷಿ ಆಯೋಗ ರಚನೆ, ಬೆಂಬಲ ಬೆಲೆ ಸೇರಿದಂತೆ ನಮ್ಮ ಬೇಡಿಕೆಗಳನ್ನು ಈಡೇರಿಸಿ. ಆಮೇಲೆ ಸಾಲ ಕೇಳಿ, ವಾಪಸ್​ ಕೊಡುತ್ತೇವೆ ಎಂದು ಹೇಳಿದರು.

ABOUT THE AUTHOR

...view details